ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ರಾಹುಲ್ ಪೂಜಾರಿ (275), ಸಮರ್ಥ ಆರ್ ಶೆಟ್ಟಿ (266), ಶ್ರೀವತ್ಸ ಜಿ. ಉಡುಪ (255), ಹೃತಿಕ್ ಎಮ್. (237), ಆಯುಷ್ (236), ರೋಹನ್ ಆಚಾರ್ (236), ನಮನ (232), ನಿಖಿತಾ (231), ಗೌತಮಿ ಎನ್. ನಾಯಕ್ (221), ಯಶಸ್ (219), ಸಮೃದ್ಧಿ ಎಸ್. ಶೆಟ್ಟಿ (218), ಸುಹಾಸ್ ಎಸ್. (215), ತೇಜಸ್ವಿನಿ (215), ಆಕಾಶ್ (214), ವೈಷ್ಣವಿ ಬಿ. (209), ಶ್ರಾವ್ಯ (205), ಶ್ರುತಿ(204), ಅಮೋಘ್ ಶೆಟ್ಟಿ (202), ಹೇಮಂತ್ (200), ಶ್ರೇಯಸ್ (200), ಸುಶ್ರುತ್ ಕುಮಾರ್ (200), ವಿಸ್ಮಿತಾ ಆಚಾರಿ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶಿಕ್ಷ ಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಬೋಧಕ ಸಿಬ್ಭಂದಿಗಳಾಗಿ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು ಭೇಟಿ ನೀಡುತ್ತಿದ್ದಾರೆ. ಬೋಧಕ ಸಿಬ್ಬಂಧಿ ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.