[quote font_size=”15″ bgcolor=”#ffffff” arrow=”yes”]ಒಂದು ಕಾರ್ಯಕ್ರಮದಿಂದಾಗಿ ಪತ್ರಕರ್ತ ರಂಗನಾಥ ಭಾರಧ್ವಾಜ್ ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಒಬ್ಬ ಜವಾಬ್ದಾರಿಯುತ ಪತ್ರಕರ್ತ ಹೀಗೇಕೆ ಮಾತನಾಡಿದರು ಎಂಬ ಗೊಂದಲ, ಅಸಹನೆ ಸಹಜವಾಗಿಯೇ ಮೂಡಿದೆ. ಖಂಡತವಾಗಿಯೂ ನಾಗೇಂದ್ರಾಚಾರ್ಯ ಅವರಿಗೆ ಭಾರಧ್ವಾಜ್ ಆಡಿದ ಮಾತಗಳು ಖಂಡನಾರ್ಹ. ಆದರೆ ಅವರ ಸಂಭಾಷಣೆಯ ತುಣುಕನ್ನು ಕೇಳಿದ ಜನ, ಒಂದು ಮಾಧ್ಯಮದ ಸಂಪಾದಕನಾಗಿ, ಕಾರ್ಯಕ್ರಮ ನಿರೂಪಕನಾಗಿ ಭಾರಧ್ವಾಜ್ ಅವರಿಗಿದ್ದ ಜವಾಬ್ದಾರಿಯನ್ನು ಮರೆತೇಬಿಟ್ಟರು. ಕಾಲ್ ಕಟ್ ಮಾಡಿದ್ದು ಹಾಗೂ ಆ ಬಳಿಕ ನಡೆದ ಅನಧಿಕೃತ ಸಂಭಾಷಣೆಯನ್ನು ತಪ್ಪು ಎಂದು ಮಾತನಾಡಿಕೊಂಡರು. ಬೈದದ್ದು ತಪ್ಪೇ. ಆದರೆ ವಾಸ್ತವವಾಗಿ ಭಾರಧ್ವಾಜ್ ಹಾಗೇಕೆ ಮಾತನಾಡಿರಬಹುದು. ಅವರಲ್ಲಿ ಅಂತಹ ಒತ್ತಡವೇನಿದ್ದಿರಬಹುದು ಅನ್ನೊದರ ಬಗ್ಗೆ ಅವರೊಂದಿಗೆ ಒಡನಾಟ ಹೊಂದಿದ್ದ ಪತ್ರಕರ್ತ ಕೀರ್ತಿ ಶಂಕರಘಟ್ಟ ಬರೆದಿದ್ದಾರೆ. [/quote]
ಕೀರ್ತಿ ಶಂಕರಘಟ್ಟ.
ನನಗೂ ರಂಗನಾಥ್ ಭಾರದ್ವಾಜ್ ಅವರಿಗೂ ಆರೇಳು ವರ್ಷದ ಪರಿಚಯ. ಅವರು ನನ್ನ ಮಾಧ್ಯಮ ಗುರುಗಳಲ್ಲಿ ಒಬ್ಬರೂ ಹೌದು. ಪ್ರಸ್ತುತ ನಾನು ಅವರ ಜೊತೆಗೆ ಕೆಲಸ ಮಾಡುತ್ತಿಲ್ಲವಾದರೂ ಇತ್ತೀಚಿನ ಭಗವಾನ್ ಚರ್ಚೆ ಹಾಗೂ ನಾಗೇಂದ್ರಾಚಾರ್ಯರಿಗೆ ಬೈದ ಆಡಿಯೋ ಬಗೆಗೆ ಒಂದಷ್ಟು ಹೇಳೋ ಪ್ರಯತ್ನ ಈ ಲೇಖನ..! ಇದನ್ನು ನಾನು ಅವರ ಶಿಷ್ಯನಾಗಿ ಖಂಡಿತಾ ಬರೀತಿಲ್ಲ. ಅವರು ನನಗಿಂತ ಸೀನಿಯರ್ ಅನ್ನೋ ಕಾರಣಕ್ಕೆ ಬಕೆಟ್ ಹಿಡಿಯೋಕೆ ಬರೀತಿಲ್ಲ..! ಕೇವಲ ಒಬ್ಬ ಪತ್ರಕರ್ತನಾಗಿ ಬರೀತಿದ್ದೇನೆ..! ಏಳೆಂಟು ವರ್ಷ ಟಿವಿ ಮಾಧ್ಯಮದಲ್ಲಿ ಕಂಡಿದ್ದನ್ನು ಅನುಭವಿಸಿ ಹೀಗಾಗಿರಬಹುದು ಅಂತ ಬರೀತಿದ್ದೇನೆ..! ಈ ಮಧ್ಯದಲ್ಲಿ ನಾನವರ ಜೊತೆ ಮಾತನಾಡಿದಾಗ ಅವರು ಹೇಳಿದ್ದನ್ನೂ ಉಲ್ಲೇಖಿಸಿ ಇದನ್ನು ಬರೀತಿದ್ದೀನಿ..! ಮೊದಲು ಓದಿ, ನಂತರ ನಿಮಗೇನನ್ಸುತ್ತೋ ಹೇಳಿ..!
ನನಗೆ ಈಗಲೂ ಶಾಕ್ ಆಗಿರೋದು ಆ ಆಡಿಯೋ ಕ್ಲಿಪ್..! ಅವರ ಬಾಯಲ್ಲಿ ಈ ಆರೇಳು ವರ್ಷದಲ್ಲಿ ನಾನ್ಯಾವತ್ತೂ ಅಂತಹ ಪದಗಳನ್ನು ಕೇಳಿರಲಿಲ್ಲ..! ಆದ್ರೆ ಏಕಾಏಕಿ ಹಾಗೆ ಹೇಳಿಬಿಟ್ರು ಅಂದ್ರೆ ಅರಗಿಸಿಕೊಳ್ಳೋದು, ನಂಬೋದು ಎರಡೂ ಕಷ್ಟವೇ..! ಆದ್ರೂ ಸಾಕ್ಷಿಯಾಗಿ ಆ ಆಡಿಯೋ ಕ್ಲಿಪ್ ಇದೆ. ಹಾಗಾಗಿ ನಂಬಲೇಬೇಕು..! ಆದ್ರೆ ನಾಗೇಂದ್ರಾಚಾರ್ಯರಂತವರಿಗೆ ಆ ತರಹದ ಕೆಟ್ಟ ಭಾಷೆಯನ್ನೇ ಉಪಯೋಗಿಸಿದ ವ್ಯಕ್ತಿಯೊಬ್ಬರು ಉಪಯೋಗಿಸಿಬಿಡ್ತಾರೆ ಅಂದ್ರೆ ಕಾರಣ ಬೇರೆಯೇ ಇರಬಹುದಾ..? ಚೆಚೆ ಬೇರೆ ಏನೂ ಕಾರಣವಿಲ್ಲ..! ಇದೆಲ್ಲಕ್ಕೂ ಮೂಲ ಒಂದೇ..! ಆ ಭಗವಾನ್..! ದಿ ಗ್ರೇಟ್ ಭಗವಾನ್..!
ಆ ಭಗವಾನ್ ಸಂದರ್ಶನದಿಂದ ಆರಂಭಿಸೋಣ.. ಭಗವಾನ್ ಸಂದರ್ಶನದಲ್ಲಿ ರಂಗನಾಥ್ ಭಾರದ್ವಾಜ್ ಅವರು ಭಗವಾನ್ ಅವರಿಗೆ ಸರಿಯಾಗಿ ಕ್ಲಾಸ್ ತಗೋಳ್ಳಿಲ್ಲ, ಅವರು `ಮೇಷ್ಟ್ರೆ ಮೇಷ್ಟ್ರೆ’ ಅಂತ ಅವರನ್ನೇ ಅಟ್ಟಕ್ಕೇರಿಸಿದ್ರು, ಭಗವಾನ್ ಮಾತನಾಡುವಾಗ ಅವಕಾಶ ಕೊಟ್ರು, ಆದ್ರೆ ನಾಗೇಂದ್ರಾಚಾರ್ಯರು ಮಾತನಾಡುವಾಗ ಅವಕಾಶವೇ ಕೊಡದೇ ಕಾಲ್ ಕಟ್ ಮಾಡಿಬಿಟ್ರು ಅನ್ನೋದು ಭಾರದ್ವಾಜ್ ಅವರ ಮೇಲಿರೋ ಆರೋಪ..! ಮೇಲ್ನೋಟಕ್ಕೆ ಅದು ನಿಜವೇ ಇರಬಹುದು. ಆದ್ರೆ ಅದಕ್ಕೆ ಕಾರಣವೂ ಇಲ್ಲದೇ ಇಲ್ಲ..! ಪೇಯ್ಡ್ ಮೀಡಿಯಾ ಅಂತ ದೂರಿದಾಗ, ಒಂದು ಜವಬ್ದಾರಿಯುತ ಮಾಧ್ಯಮದ ಸಂಪಾದಕನಾಗಿ, ಕಾರ್ಯಕ್ರಮ ನಿರೂಪಕನಾಗಿ ಅವರಿಗೆ ಬೇರೇನೂ ಮಾಡೋಕೆ ಸಾಧ್ಯವಿರಲಿಲ್ಲ ಅನ್ನೋದು ನನಗಿರುವ ಅನುಭವದಲ್ಲಿ ನನಗೆ ಗೊತ್ತಿರೋ ಸತ್ಯ..! ಯಾಕೆ ಅಂದ್ರಾ..? ನೀವೇ ಯೋಚಿಸಿ ನೋಡಿ, ಭಗವಾನ್ ಅವರಿಗೆ ನೀಡ್ತಿರೋ ಅವಾರ್ಡ್ ವಿಚಾರದಲ್ಲಿ ನಾವು ನೀವು ಅದೆಷ್ಟು ಹೋರಾಡಿದ್ವಿ. ಹನ್ನೊಂದು ಸಾವಿರ ಜನ ಪಿಟಿಶನ್ ಸೈನ್ ಮಾಡಿದ್ವಿ..! ಏನೂ ಆಗ್ಲಿಲ್ಲ. ಈ ಭಗವಾನ್ ಯಾರ ಕೈಗೂ ಸಿಗಲೇ ಇಲ್ಲ..! ಆದ್ರೆ ಅವರನ್ನು ಮೊದಲಿಗೆ ಮಾಧ್ಯಮದ ಎದುರಿಗೆ ತಂದು ಕೂರಿಸಿದ್ದು ಈಟಿವಿ ನ್ಯೂಸ್..! ಸಮಾಜದಲ್ಲಿ ಅಷ್ಟು ವಿರೋಧ ಎದುರಿಸುತ್ತಿರುವ ವ್ಯಕ್ತಿಯೊಬ್ಬರನ್ನು ಸ್ಟೂಡಿಯೋದಲ್ಲಿ ತಂದು ಕೂರಿಸುವಾಗ ಅದೆಂಥಾ ಹರಸಾಹಸ ಮಾಡಬೇಕಾಗುತ್ತೆ ಅಂತ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಚೆನ್ನಾಗಿ ಗೊತ್ತಿರುತ್ತೆ..! ಅವರು ಬರಲ್ಲ ಅಂತಾರೆ, ಟಿವಿಯವರು ಬಿಡಲ್ಲ ಅಂತಾರೆ..! `ನೀವು ಬನ್ನಿ ಸಾರ್, ಏನೂ ಸಮಸ್ಯೆ ಆಗಲ್ಲ.. ನಾನು ಮೇಂಟೇನ್ ಮಾಡ್ತೀನಿ, ಜನರಿಗೆ ನಿಮಗನಿಸಿದ್ದು ಹೇಳಿ ಸಾರ್, ನಿಮ್ಮ ಮನಸಲ್ಲೇನಿದಿಯೋ ಜನರ ಎದುರಿಗೆ ಇಡಿ ಸಾರ್, ನಾವು ನಿಮಗೆ ವೇದಿಕೆ ಕಲ್ಪಿಸಿ ಕೊಡ್ತೀವಿ’ ಅಂತೆಲ್ಲಾ ಕಾಡಿಬೇಡಿ ಅವರನ್ನು ಸ್ಟೂಡಿಯೋದ ಒಳಗೆ ಕೂರಿಸೋದ್ರೊಳಗೆ ಸಾಕುಸಾಕಾಗಿ ಹೋಗಿರುತ್ತೆ. ಹಾಗೆಯೇ ಈ ಭಗವಾನರನ್ನು ತಂದು ಕೂರಿಸಿವಾಗ ಅಂತದ್ದೇ ಸಾಹಸ ಮಾಡಿದ್ರು ಸಂಪಾದಕ ರಂಗನಾಥ್ ಭಾರದ್ವಾಜ್..! ತಮ್ಮದೇ ಸ್ಟೂಡಿಯೋಗೆ ತಂದು ಕೂರಿಸಿ ತಾವೇ ಲೆಫ್ಟ್ ರೈಟ್ ಎತ್ತೋದು ಅಷ್ಟು ಸುಲಭವಲ್ಲ..! ಅದಕ್ಕೋಸ್ಕರ ರಂಗನಾಥ್ ಭಾರದ್ವಾಜ್ ಅವರು ನಾಗೇಂದ್ರಾಚಾರ್ಯ ಅವರಿಗೆ ಫೋನೋ ತಗೊಂಡು ಆ ಕೆಲಸವನ್ನು ಅವರಿಗೆ ವಹಿಸಿದ್ರು..! ಅಲ್ಲಿಗೆ ನಾಗೇಂದ್ರಾಚಾರ್ಯರೇ ಹೇಳುವ ಪ್ರಕಾರ, ಭಗವಾನರನ್ನು ಕರೆದು ಕೂರಿಸಿ ಹೊಗಳಿ ಅಟ್ಟಕ್ಕೇರಿಸೋ ಉದ್ದೇಶ ಭಾರದ್ವಾಜ್ ಅವರಿಗಿರಲಿಲ್ಲ ಅನ್ನೋದು ಸ್ಪಷ್ಟ..! ಅಂತೆಯೇ ಕಾರ್ಯಕ್ರಮದಲ್ಲಿ ನಾಗೇಂದ್ರಾಚಾರ್ಯರನ್ನು ಲೈವ್ ನಲ್ಲಿ ಕನೆಕ್ಟ್ ಮಾಡಲಾಯ್ತು, ಮಾತು ಆರಂಭವಾಯ್ತು..! ಆದ್ರೆ ಮಾತಿನ ಜಟಾಪಟಿ ಯಾವಾಗ ಏಕವಚನದ ರೂಪ ಪಡೀತೋ, ಭಾಷೆ ಪ್ರಸಾರ ಯೋಗ್ಯವಲ್ಲ ಅನ್ನಿಸೋಕೆ ಶುರುವಾಯ್ತೋ, ಆಗ ಭಾರದ್ವಾಜ್ ನಾಗೇಂದ್ರಾಚಾರ್ಯರನ್ನು ಕಂಟ್ರೋಲ್ ಮಾಡೋ ಪ್ರಯತ್ನ ಮಾಡಿದ್ರು. ಕೊನೆಗೆ ಅದು ಕಂಟ್ರೋಲ್ ತಪ್ಪಿದಾಗ ಕಾಲ್ ಡಿಸ್ಕನೆಕ್ಟ್ ಮಾಡಲಾಯ್ತು..! ಈ ನಡುವೆ ನಿಗದಿತ ಕಾರ್ಯಕ್ರಮಕ್ಕೆ ಬಂದಿದ್ದ ಭಗವಾನರು `ನನಗೆ ತಡವಾಯ್ತು ನಾನು ಹೊರಟೆ, ನಾನು ಹೊರಟೆ’ ಅಂತ ರಾಗ ತೆಗೆದ್ರು..! ಈಗಾಗಲೇ ನಿಗದಿಯಾಗಿರೋ ಕಾರ್ಯಕ್ರಮದ ನಡುವೆ, ಕಾರ್ಯಕ್ರಮಕ್ಕೆ ಬಂದ ಗೆಸ್ಟ್ ಅರ್ಧಕ್ಕೇ ಹೋಗಿಬಿಟ್ರೆ ಅದು ಟಿವಿಯವರ ಪಾಲಿನ ಅತಿದೊಡ್ಡ ಶಾಪ..! ಹಾಗಾಗಿ ಹೇಗಾದ್ರೂ ಮಾಡಿ ಕಾರ್ಯಕ್ರಮ ಮುಗಿಯೋ ತನಕ ಅವರನ್ನು ಹಿಡಿದು, ತಡೆದು ನಿಲ್ಲಿಸಲೇಬೇಕು. ಆ ಕೆಲಸವನ್ನು ರಂಗನಾಥ್ ಭಾರದ್ವಾಜ್ ಮಾಡಿದ್ರು..! ಆದ್ರೆ ಯಾವಾಗ ಮಾತಿನ ನಡುವೆ ಭಾರದ್ವಾಜ್ ಅವರು ಮಾತನಾಡಿದಾಗ, ನಾಗೇಂದ್ರಾಚಾರ್ಯರು `ನೀವೆಲ್ಲಾ ಪೇಯ್ಡ್ ಮೀಡಿಯಾ’ ಅಂದ್ರೋ, ಆಗಲೇ ಕಾರ್ಯಕ್ರಮದಲ್ಲಿ ವಾದ ವಿವಾದ ಜೋರಾಗಿದ್ದು..! ಪೇಯ್ಡ್ ಮೀಡಿಯಾ ಅಂತ ಹೇಳಿದಾಗ ಅದನ್ನು ಸಹಿಸದ ರಂಗನಾಥ್ ಭಾರದ್ವಾಜ್, ನಾಗೇಂದ್ರಾಚಾರ್ಯರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ..! ಪೇಯ್ಡ್ ಮೀಡಿಯಾ ಜೊತೆ ಯಾಕೆ ಮಾತಾಡ್ತೀರಿ ಅಂತ ಕಾಲ್ ಕಟ್ ಮಾಡಿದ್ರು..! ಯಾವಾಗ ಕಾಲ್ ಡಿಸ್ಕನೆಕ್ಟ್ ಮಾಡಲಾಯ್ತೋ ಆಗ ನಾಗೇಂದ್ರಾಚಾರ್ಯರರಿಗೆ ಸಹಜವಾಗಿ ಕೋಪ ಬಂತು..! ಕಾರ್ಯಕ್ರಮದ ರೂಪುರೇಷ ಸಿದ್ಧಪಡಿಸುವಾಗ ದೂರವಾಣಿಯಲ್ಲಿ ಮಾತನಾಡಿದ್ದ ನಾಗೇಂದ್ರಾಚಾರ್ಯರೇ, `ಭಾರದ್ವಾಜ್ ನನಗೆ ಮುಂಚೆಯೇ ಕರೆಮಾಡಿ ಬೆಂಡಿತ್ತಿ ಅಂತ ಹೇಳಿ ಲೈವ್ ನಲ್ಲಿ ಅವಮಾನ ಮಾಡಿದ್ರು. ಅವರೊಬ್ಬ `ಗೋಮುಖ ವ್ಯಾಘ್ರ’ ಅಂದುಬಿಟ್ರು..! `ಇಂತಹ ಗೋಮುಖ ವ್ಯಾಘ್ರನಿಗೆ ಹತ್ತು ಪ್ರಶ್ನೆಗಳು’ ಅಂತ ಫೇಸ್ ಬುಕ್ಕಲ್ಲಿ ತಮ್ಮ ಧ್ವನಿ ಎತ್ತಿದ್ರು..! ವಾಹಿನಿಯ ಸಂಪಾದಕ ಹಾಗೂ ಕಾರ್ಯಕ್ರಮ ನಿರೂಪಕನಾಗಿ ಅವರಿಗೆ ಬೇರೆ ಏನೂ ಮಾಡೋಕೆ ಸಾಧ್ಯ ಇರಲಿಲ್ಲ..! ನಾನು ನೀವು ಯೋಚಿಸೋ ಹಾಗೆ ಹಿಂದುತ್ವದ ಪರವಾಗಿ ಅವರು ಏರುಧ್ವನಿಯಲ್ಲಿ ಪ್ರಶ್ನೆ ಮಾಡೋಕೆ ಸಾಧ್ಯವಾಗೋದಿಲ್ಲ..! ಅವರೊಬ್ಬ ಬ್ರಾಹ್ಮಣನಾಗಿಯೂ ಕಾರ್ಯಕ್ರಮ ನಡೆಸಿಕೊಡೋಕೆ ಸಾಧ್ಯವಾಗೋದಿಲ್ಲ..! ಆ ಜಾಗದಲ್ಲಿ ಭಾರದ್ವಾಜ್ ಮಾತ್ರವಲ್ಲ, ಹಮೀದ್ ಪಾಳ್ಯ, ಜಯಪ್ರಕಾಶ್ ಶೆಟ್ಟಿ ಇದ್ದರೂ ಪರಿಸ್ಥಿತಿ ವ್ಯತಿರಿಕ್ತವಾಗೇನೂ ಇರುತ್ತಿರಲಿಲ್ಲ..! ಒಂದು ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ಮಾಡೋದಕ್ಕೂ, ರೆಕಾರ್ಡ್ ಮಾಡಿ ಪ್ರಸಾರ ಮಾಡೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ..! ಲೈವಲ್ಲಿ ಏನೂ ಎಡಿಟ್ ಮಾಡೋಕಾಗಲ್ಲ, ಅಲ್ಲಿ ಫಿಲ್ಟರ್ ಇರಲ್ಲ..! ಯಾವಾಗ ಪರಿಸ್ಥಿತಿ ಕೈಮೀರಿ ಹೋಗ್ತಿದೆ ಅನಿಸುತ್ತೋ ಆಗ ಕಾಲ್ ಡಿಸ್ಕನೆಕ್ಟ್ ಮಾಡೋದು ಬಿಟ್ಟು ಬೇರೆ ಅವಕಾಶ ಇರೋದಿಲ್ಲ..! ಇದೇ ಕಾರ್ಯಕ್ರಮವನ್ನು ರಂಗನಾಥ್ ಭಾರದ್ವಾಜ್ ಅವರು ರೆಕಾರ್ಡ್ ಮಾಡಿದ್ದಿದ್ದರೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಆಗ್ತಾನೇ ಇರಲಿಲ್ಲ..! ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಆ ಕಾರ್ಯಕ್ರಮ ಒಂಥರಾ `ಬಹುನಿರೀಕ್ಷಿತ ಸಿನಿಮಾ’ ಆಗಿತ್ತು..! `ರಂಗನಾಥ್ ಹಂಗೆ ಕೇಳ್ಬೋದು, ಹಿಂಗೆ ಕೇಳ್ಬೋದು, ಭಗವಾನ್ ಅವರ ಬೆಂಡೆತ್ತಿ ಬ್ರೇಕ್ ಹಾಕಬಹುದು’ ಅಂತ ನಿರೀಕ್ಷೆ ಇಟ್ಕೊಂಡು ಕೂತವರಿಗೆ ಒಬ್ಬ ಸಂಪಾದಕನ ಹಾಗೂ ನಿರೂಪಕನ ಜವಬ್ದಾರಿ ಅರ್ಥವಾಗಲಿಲ್ಲ..! ಸತ್ಯವಾಗಿ ಹೇಳ್ತೀನಿ ಗೆಳೆಯರೇ, ಟಿವಿ ಸ್ಕ್ರೀನಲ್ಲಿ ಲೈವಲ್ಲಿ ಕೂತು ಭಗವಾನ್ ಅಂತವರನ್ನು ಸಂದರ್ಶನ ಮಾಡೋದಿದ್ಯಲ್ಲ, ಅದೊಂತರಾ ಕತ್ತಿಯ ತುದಿಯನ್ನು ಕಣ್ಣೆದುರಿಗೆ ಇಟ್ಟುಕೊಂಡ ಹಾಗೆ. ಸ್ವಲ್ಪ ಯಾಮಾರಿದ್ರೆ ದೃಷ್ಟಿಯೇ ಹೋಗುತ್ತೆ. ಆದ್ರೆ ಆ ತೂಗುಗತ್ತಿ ವೀಕ್ಷಕನಿಗೆ ಯಾವತ್ತೂ ಕಾಣಿಸೋದೇ ಇಲ್ಲ..! ಕೆಲವರ ಕಮೆಂಟ್ ಗಮನಿಸ್ದೆ, `ಭಗವಾನ್ ಮತ್ತು ನಾಗೇಂದ್ರಾಚಾರ್ಯರು ಏನಾದ್ರೂ ಕಿತ್ತಾಡ್ಕೋತಾ ಇದ್ರು, ಇವರ್ಯಾಕೆ ಅಡ್ಡ ಹೋಗ್ಬೇಕಿತ್ತು?’ ಅಂತ..! ಫ್ರೆಂಡ್ಸ್, ಅದು ಹಾಗಾಗೋದಿಲ್ಲ..! ನ್ಯೂಸ್ ಚ್ಯಾನಲ್ ಗಳಿಗೂ ಕಟ್ಟುನಿಟ್ಟಿನ ಕಾನೂನಿದೆ. ಇದೇ ಭಗವಾನ್ ಹೋಗಿ ದೂರು ಕೊಟ್ರೆ, ವಾಹಿನಿ ಕೋರ್ಟಲ್ಲಿ ನಿಲ್ಲಬೇಕಾಗುತ್ತೆ..! ಭಾರದ್ವಾಜ್ ಅವರು ಬರಿಯ ಬ್ರಾಹ್ಮಣನಾಗಿದ್ರೆ ಅದೆಲ್ಲವನ್ನೂ ಮಾಡ್ತಿದ್ರೇನೋ, ಆದ್ರೆ ಅವರು ಆ ವಾಹಿನಿಯ ಸಂಪಾದಕರೂ ಹೌದು. ಹಾಗಾಗಿ ಅದು ಕಷ್ಟ..! (ಕುಂದಾಪ್ರ ಡಾಟ್ ಕಾಂ ಲೇಖನ)
ಈಗ ಮತ್ತೆ ವಿಷಯಕ್ಕೆ ಬರ್ತೀನಿ. ಕಾರ್ಯಕ್ರಮದ ಪ್ಲ್ಯಾನ್ ಪ್ರಕಾರ ನಾಗೇಂದ್ರಾಚಾರ್ಯರು ಬೆಂಡ್ ಎತ್ತೋಕೆ ಶುರು ಮಾಡಿದ್ರೂ ಸಹ ಅದು ಕೈಮೀರಿ ಹೋದಾಗಿನ ಯಡವಟ್ಟುಗಳು ಕೋಪಕ್ಕೆ ತುತ್ತಾಗಿ ಭಾರದ್ವಾಜರು `ಗೋಮುಖ ವ್ಯಾಘ್ರ ಅನಿಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹ್ಯಾಶ್ ಟ್ಯಾಗ್ ಆದ್ರು..! ಯಾವಾಗ ಇದೆಲ್ಲಾ ಆಯ್ತೋ, ಎಷ್ಟೇ ಗಟ್ಟಿಗರಾದ್ರೂ ಸಹ ಭಾರದ್ವಾಜ್ ಅವರಿಗೆ ಅವರ ಫೇಸ್ ಬುಕ್ ಪೇಜಿಗೆ ಬಂದು ಬೀಳುತ್ತಿದ್ದ ಮೆಸೇಜ್ ಗಳು ಇರಿಸಿಮುರುಸು ಉಂಟು ಮಾಡಿರುತ್ತೆ. ಆಗ ಆತ್ಮೀಯರೇ ಆಗಿದ್ದ ನಾಗೇಂದ್ರಾಚಾರ್ಯರಿಗೆ ಕರೆಮಾಡಿ ` ಯಾಕೆ ಹೀಗೆಲ್ಲಾ ಮಾಡ್ತಿದ್ದೀರಿ..?’ ಅಂತ ಪ್ರಶ್ನೆ ಮಾಡಿರಬಹುದು. ಅದಕ್ಕೂ ಮುಂಚೆ ದಯವಿಟ್ಟು ಅದನ್ನು ತೆಗೀರಿ ಅಂತ ರಿಕ್ವೆಸ್ಟೂ ಮಾಡಿರಬಹುದು..! ಆಡಿಯೋ ಕ್ಲಿಪ್ಪಲ್ಲಿ ಕೇಳಿಸಿಕೊಂಡ ಹಾಗೆ, ಯಾವಾಗ ನಾಗೇಂದ್ರಾಚಾರ್ಯರು `ಇದನ್ನೂ ಫೇಸ್ ಬುಕ್ಕಲ್ಲಿ ಹಾಕ್ತೀನಿ’ ಅಂದ್ರೋ, ಆಗ ಭಾರದ್ವಾಜ್ ಅವರು ರೈಸ್ ಆಗಿದ್ದಾರೆ.. ಇದೆಂಥಾ ಬ್ಲ್ಯಾಕ್ ಮೇಲ್..? ಮಾತೆತ್ತಿದ್ರೆ ಫೇಸ್ ಬುಕ್ಕಲ್ಲಿ ಹಾಕ್ತೀನಿ ಅಂತೀರಾ..? ಅಂತ ರೈಸ್ ಆಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿರಬಹುದು..! ಒಂದಂತೂ ಸತ್ಯ, ರಂಗನಾಥ್ ಅವರಿಂದ ಇದನ್ನು ಜನ ಯಾವತ್ತೂ ನಿರೀಕ್ಷೆ ಮಾಡಿರದ ಕಾರಣಕ್ಕೆ ಅದು ತುಂಬ ಅಸಹನೀಯ ಅನಿಸ್ತು..! ನಾ ಕಂಡ ಹಾಗೆ ಅವರ ಬಾಯಲ್ಲಿ ಯಾವತ್ತೂ ಅಂತಹ ಶಬ್ಧಗಳನ್ನು ನಾನಂತೂ ಕೇಳಿಲ್ಲ. ಅವರ ಜೊತೆಗೆ ಕೆಲಸ ಮಾಡಿರೋ ಯಾರಿಗಾದ್ರೂ ಕೇಳಿ, ಅವರೂ ಅದನ್ನೇ ಹೇಳ್ತಾರೆ. ಆದ್ರೆ ಅವರ ಬಾಯಲ್ಲಿ ಅ ಪದಗಳು ಹೇಗೆ ಬಂತು ಅನ್ನೋದೇ ಆಶ್ಚರ್ಯ..! ರಾತ್ರೋರಾತ್ರಿ ಒಂದು ಕಾರ್ಯಕ್ರಮದಿಂದಾಗಿ ಇಷ್ಟು ದಿನ ಗಳಿಸಿದ ಹೆಸರು ಹಾಳಾಗುತ್ತೆ ಅನ್ನೋ ಭಯಕ್ಕೆ ಮಾತಾಡಿದ್ರಾ..? ಫೇಸ್ ಬುಕ್ಕಲ್ಲಿ ತನ್ನ ತೇಜೋವಧೆ ಮಾಡಿಬಿಡ್ತಾರೆ ಅಂತ ಆತಂಕಕ್ಕೊಳಗಾಗಿ ಅಂತಹ ಪದಗಳನ್ನು ಉಪಯೋಗಿಸಿಬಿಟ್ರಾ..? ಅಥವಾ ಅಷ್ಟು ಆತ್ಮೀಯವಾಗಿದ್ದ ನಾಗೇಂದ್ರಾಚಾರ್ಯರು ಹೀಗೆ ಮಾಡಿಬಿಟ್ರಲ್ಲಾ ಅನ್ನೋ ನೋವಲ್ಲಿ ಕೂಗಾಡಿಬಿಟ್ರಾ..? ಇದೆಲ್ಲಾ ಮಾನವ ಸಹಜ ಲಕ್ಷಣಗಳೇ ನಿಜ.. ಆದ್ರೆ ರಂಗನಾಥ್ ಭಾರದ್ವಾಜ್ ಹಾಗೆ ಮಾತನಾಡಬಾರದಿತ್ತು ಅನ್ನೋದಷ್ಟೆ ಎಲ್ಲರ ವಾದ..! ಯಾವಾಗ ತನ್ನ ಪತಿ ಹೀಗೆ ತಾಳ್ಮೆ ಕಳೆದುಕೊಂಡ್ರೋ, ಆಗ ಅವರ ಪತ್ನಿಯಾಗಿ ನಾಗೇಂದ್ರಾಚಾರ್ಯರ ಜೊತೆ ಕನ್ವಿನ್ಸಿಂಗ್ ಆಗಿ ಮಾತನಾಡಿದ ರಾಧಿಕಾ ರಂಗನಾಥ್, ಆಚಾರ್ಯರು ಕನ್ವಿನ್ಸ್ ಆಗದೇ ನಿಮ್ಮ ಆಡಿಯೋನೂ ಫೇಸ್ ಬುಕ್ಕಲ್ಲಿ ಹಾಕ್ತೀನಿ ಅಂದಾಗ ಅವರಿಗೆ ಉಗಿದುಬಿಟ್ರಾ..? ಇದಿಷ್ಟು ನನ್ನಲ್ಲಿ ಮೂಡಿದ ಪ್ರಶ್ನೆಗಳು..! (ಕುಂದಾಪ್ರ ಡಾಟ್ ಕಾಂ ಲೇಖನ)
ಅದೇನೇ ಇರಲಿ ಕೆಲವು ವಿಷಯಗಳು ನನಗೆ ತಿಳಿದಿರುವಂತೆ ನಿಮ್ಮೆದುರಿಗಿಡ್ತೀನಿ. ರಂಗನಾಥ್ ಭಾರದ್ವಾಜ್ ಯಾವತ್ತೂ ಹಿಂದೂ ವಿರೋಧಿ ಅಲ್ಲ. ಅವರು ಯಾವತ್ತೂ ದೇವರಿಗೆ ಪೂಜೆ ಮಾಡದೇ ಮನೆಯಿಂದ ಹೊರಗೆ ಕಾಲಿಡಲ್ಲ..! ನಾನೇ ನೋಡಿದ ಹಾಗೇ ಪ್ರತಿನಿತ್ಯ ಅವರು ಪೂಜೆಗೆ ಕನಿಷ್ಟ ಒಂದು ಗಂಟೆ ಮೀಸಲಿಡ್ತಾರೆ. ಅವರ ಮನೆಯಲ್ಲಿ ತಿಂಗಳಿಗೊಮ್ಮೆಯಾದ್ರೂ ಸತ್ಯನಾರಾಯಣ ಪೂಜೆ, ದೇವಿ ಪೂಜೆ, ಗೌರಿ ಪೂಜೆ, ಅದು ಇದು ಅಂತ ಇದ್ದೇ ಇರುತ್ತೆ..! ಅವರ ಬಾಯಲ್ಲಿ ಅದೆಷ್ಟೋ ಮಂತ್ರಗಳು ಪಟಪಟನೆ ಹರಿದಾಡುತ್ತೆ..! ಅವರು ಮನೆಯಿಂದ ಹೊರಗೆ ಕಾಲಿಡುವಾಗ ಗಂಧ ಪ್ರಸಾದ ಹಣೆಯ ಮೇಲಿಲ್ಲದ ದಿನವೇ ಇಲ್ಲ..! ನಾನೊಂದು ದಿನ ನನ್ನ ಸಹೋದ್ಯೋಗಿ ಗೆಳೆಯನಿಗೆ `ಯಾಕೋ ನನ್ನ ಮಗನೆ’ ಅಂತ ಹೇಳಿದ್ದಕ್ಕೆ ಅರ್ಧ ಗಂಟೆ ಕ್ಲಾಸ್ ತಗೊಂಡಿದ್ರು. ಆ ತರ ಎಲ್ಲಾ ಮಾತಾಡಬಾರದು ಅಂತ..! ಆದ್ರೆ ಇವತ್ತು ಸಾಮಾಜಿಕ ತಾಣಗಳಲ್ಲಿ ಅವರ ಬಗ್ಗೆ ಮಾತಾಡೋದು ನೋಡಿದ್ರೆ ಆಶ್ಚರ್ಯ ಆಗ್ತಿದೆ..! ಈಗಲೂ ಚ್ಯಾಲೆಂಜ್ ಮಾಡ್ತೀನಿ, ಟಿವಿ ಪರದೆ ಬಿಟ್ಟು ಭಗವಾನ್ ಭಾರದ್ವಾಜ್ ಅವರ ಕೈಗೆ ಸಿಕ್ಕಿದ್ರೆ ಮುಲಾಜಿಲ್ಲದೇ ಅವರಿಗೆ ನೀರು ಕುಡಿಸಿಬಿಡ್ತಾರೆ..! ಅವರ್ಯಾರೋ ಹಿಂದೂ ದೇವತೆಗಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದನ್ನ ಸಹಿಸಿಕೊಳ್ಳಲಾಗದೇ ರಕ್ತ ಕುದಿಸಿಕೊಳ್ಳುತ್ತಿರುವ ನಾವುಗಳು, ಅವರಿಗೆ ವರವೇನೋ ಎಂಬಂತೆ ನಮ್ಮವರನ್ನೇ ದೂರ ಮಾಡುತ್ತಿದ್ದೇವೆ..! ನಾ ಕಂಡಂತೆ `ಕೆಲವರನ್ನು ಓಲೈಸುವ ಜಾತ್ಯಾತೀತ ಪತ್ರಕರ್ತರ ಪಟ್ಟಿ’ಯಲ್ಲಿ ರಂಗನಾಥ್ ಭಾರದ್ವಾಜ್ ಇಲ್ಲ..! ಅವರ ಹುದ್ದೆ, ಅವರ ಜವಬ್ದಾರಿ ಅಷ್ಟೆಲ್ಲಾ ಅವರ ಕೈಲಿ ಮಾಡಿಸಿಬಿಟ್ಟಿದೆ. ಅದೇ ಈಟಿವಿ ಅವರದ್ದೇ ಸ್ವಂತದ್ದಾಗಿದ್ರೂ ಮುಲಾಜಿಲ್ಲದೇ ನಾವು ನೀವು ನಿರೀಕ್ಷಿಸಿದಂತೆ ಭಗವಾನರ ಬೆಂಡೆತ್ತಿಬಿಡ್ತಿದ್ದರೇನೋ..! ಎರಡು ಮೂರು ದಿನಗಳ ಬೆಳವಣಿಗೆಯನ್ನು ಗಮನಿಸಿ ನನಗನಿಸಿದ್ದನ್ನು ಹೇಳಬೇಕು ಅನಿಸಿ ನಿಮ್ಮ ಮುಂದಿಟ್ಟಿದ್ದೇನೆ..! ಇದು ರಂಗಾನಾಥ್ ಭಾರದ್ವಾಜರನ್ನು ವಹಿಸಿಕೊಂಡು ಬರೆದ ಲೇಖನವಲ್ಲ. ಒಬ್ಬ ಜವಬ್ದಾರಿಯುತ ಪತ್ರಕರ್ತನಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಚರ್ಚಿಸೋದು ಎಷ್ಟು ಕಷ್ಟದ ಕೆಲಸ ಎಂಬುದನ್ನು ವಿವರಿಸ್ತಾ ಇದೀನಿ..! ಅವತ್ತು ಕರಣ್ ಥಾಪರ್ ಸಂದರ್ಶನ ಮಾಡುವಾಗ ನರೇಂದ್ರ ಮೋದಿಯವರು ಮೈಕ್ ಬಿಚ್ಚಿಟ್ಟು ಎದ್ದು ಹೋದಾಗಲೂ ನಾವು ಕರಣ್ ಥಾಪರ್ ಅವರನ್ನೇ ದೂರಿದ್ವಿ. ಮೊನ್ನೆ ಭಗವಾನ್ ಮೈಕ್ ಬಿಚ್ಚಿಟ್ಟು ಎದ್ದು ಹೋಗಿದ್ರೆ ಮತ್ಯಾರೋ ಒಂದಷ್ಟು ಜನ ರಂಗನಾಥ್ ವಿರುದ್ಧ ಮಾತಾಡ್ತಿದ್ರು..! ಚಕ್ರವರ್ತಿ ಸೂಲಿಬೆಲೆಯವರು ಸಹ ಅವತ್ತಿನ ದಿನ ರಂಗನಾಥ್ ಭಾರದ್ವಾಜ್ ಕಾರ್ಯಕ್ರಮ ಮ್ಯಾನೇಜ್ ಮಾಡಿದ ರೀತಿ ಸರಿ ಇತ್ತು, ಇಲ್ಲದಿದ್ರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಅಂತ ಹೇಳಿದ್ದಾರೆ..! ಡಾ.ಸೆಲ್ವಪಿಳ್ಳೈ ಅಯ್ಯಂಗಾರ್ ಸಹ ಭಗವಾನ್ ಅವರನ್ನು ಕರ್ಕೊಂಡ್ ಬಂದಿದ್ದೇ ದೊಡ್ಡ ವಿಷ್ಯ, ಅಂತದ್ರಲ್ಲಿ ನೀವು ಪ್ರೋಗ್ರಾಂ ಹ್ಯಾಂಡಲ್ ಮಾಡಿದ ರೀತಿ ನಿಜಕ್ಕೂ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ನಾವೆಲ್ಲಾ ಒಂದೇ, ಒಂದಾಗೇ ಇರೋಣ..! ಅವರು ಬಳಸಿರೋ ಶಬ್ದಗಳು ಅವಾಚ್ಯ ನಿಜ. ಅವರಿಗೂ ಅದು ತಪ್ಪು ಅಂತ ಅನಿಸಿರುತ್ತೆ..! ಸಾಧ್ಯವಾದ್ರೆ ಇದೊಂದು ಸಲ ಕ್ಷಮಿಸಿಬಿಡೋಣ..! ಭಗವಾನ್ ಕಾರಣಕ್ಕೆ ಭಾರದ್ವಾಜರನ್ನು ದೂರವಿಡೋದು ಬೇಡ..! ನಾಗೇಂದ್ರಾಚಾರ್ಯರಿಗೂ ಪರಿಸ್ಥಿತಿ ಅರ್ಥವಾಗಲಿ..! ಇದು ಒಬ್ಬ ಭಾರದ್ವಾಜರ ಕಥೆಯಲ್ಲ, ಪ್ರತಿ ಪತ್ರಕರ್ತನ ಕಥೆ..! (ಕುಂದಾಪ್ರ ಡಾಟ್ ಕಾಂ ಲೇಖನ) ಅಂದಹಾಗೆ ನಾನು ಹಿಂದೂ ವಿರೋಧಿ ಅಂತ ಹೇಳಿಬಿಡಬೇಡಿ.. ಹಣೆಯಲ್ಲಿ ಕುಂಕುಮವಿಟ್ಟುಕೊಂಡೇ ಇಡಿ ಲೇಖನ ಟೈಪ್ ಮಾಡಿದ್ದೇನೆ..!
‘ಕುಂದಾಪ್ರ ಡಾಟ್ ಕಾಂ’ ನಲ್ಲಿ ಪ್ರಕಟಗೊಳ್ಳವ ಲೇಖನ, ಬರಹಗಳು ಆಯಾ ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ.
Bhagavan avara karanakke Bharadwaj avarannu doora idthilla. Bharadwaj avaru Bhagavanara karanakke Nagendracharyarannu doora idtha idare, Neevu program nodirbodu ide Bharadwaj avru Nagendracharyarige nam channelnalli nimge inmele avakashane illa andru, eega heli yarinda yaru yaranna doora madtha idare.
Nimage andre media davarige baghavan nannu media ge karedu kurisude dodda kelasavadre, hindu samskrithi yannu yetti hidiyodu adakinta dodda jawbadari anta anisalillave!?.
ಬೊ…ಮಗ ಎಂದು ಮುತ್ತು ಉದರಿಸಿದ ರಂಗನಾಥ್ರವರಿಗೆ ತಪ್ಪು ಅರಿವಾಗಿದ್ದರೆ ಕ್ಷಮೆ ಕೇಳಬೇಕಲ್ಲವೆ.ನಿಮ್ಮ ಲೇಖನದಲ್ಲಿ ಸ್ವ ಹಿತಾಸಕ್ತಿ ಗೋಚರಿಸುತ್ತದೆ.ಗುರು- ಶಿಷ್ಯರ ನಡುವಿನ ಲೇಖನ ಹೀಗೆ ಇರುತ್ತದೆ ಎಂದು ಊಹಿಸಬಹುದು.
ಕಡೆಯದಾಗಿ
ಭರದ್ವಾಜರ ಮೇಲಿನ ಗೌರವ ಪೂರ್ಣ ಹೋಗಿದೆ.
ಮೀಡಿಯಾ ಮೇಲಿನ ನಂಬಿಕೆಯು ಕೂಡ.
Sulibeli chakravarthy was right to his point . Media must expose the truth .If your real intention was just to give publicity and highlight bagwan as hero , then why did you call chakravarthy.k lets agree the point that the anchor can’t speak to that bagwans face ,atleast he must have allowed chakravarthy to speak.why thr was a discrimination when both Wer speaking ,he should have supported chakravarthy also right .Both should have given equal opportunity to speak .
bhagavan sulibeliyavarannu e sulibeli annabahudu, acharyarannu ninnajji annabahudu. idella avara javabdari allave ?
chv