ಲಯನ್ಸ್ ಕ್ಲಬ್ ತೆಕ್ಕಟ್ಟೆ:  ಸ್ಪಿಂಗ್ ಝೋನ್ ಸೋಶಿಯಲ್ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕುಂಭಾಶಿಯ ಗಾಯತ್ರಿ ಸಭಾಭವನದಲ್ಲಿ ತೆಕ್ಕಟ್ಟೆ ಲಯನ್ಸ್ ಕ್ಲಬ್ ವತಿಯಿಂದ ಸ್ಪಿಂಗ್ ಝೋನ್ ಸೋಶಿಯಲ್ ಕಾರ್ಯಕ್ರಮ  ಇತ್ತೀಚಿಗೆ ಆಯೋಜಿಸಲಾಗಿತ್ತು.  

Call us

Click Here

ಪ್ರಾಂತ್ಯ VI ವಲಯ IIರ ವಲಯಾಧ್ಯಕ್ಷ ಶಂಕರ ಶೆಟ್ಟಿ ಬವಲಾಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಳೆದೊಂದು ವರ್ಷದ ಅವಧಿಯಲ್ಲಿ ವಲಯ IIರ ಎಲ್ಲಾ ಕ್ಲಬ್‌ಗಳ ಪದಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಅವರೆಲ್ಲರನ್ನು ಸನ್ಮಾನಿಸಿದರು. ಈ ಅವಧಿಯಲ್ಲಿ ಸಹಕರಿಸಿದ ಲಯನ್ಸ್ ಜಿಲ್ಲೆ 317Cಯ ಪ್ರಾಂತ್ಯ VI ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ ಕ್ಯಾಬಿನೇಟ್ ಸದಸ್ಯರ ಹಾಗೂ ಪದಾಧಿಕಾರಿಗಳಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.

ಪ್ರಥಮ ಉಪ ಗವರ್ನರ್ ಲಯನ್ ಮಹಮದ್ ಹನೀಫ್, ದ್ವಿತೀಯ ಉಪಗವರ್ನರ್ ಸ್ವಪ್ನ ಸುರೇಶ್ ಹಾಗೂ 2026-27ನೇ ಸಾಲಿಗೆ ಗವರ್ನರ್ ಆಗಿ ಆಯ್ಕೆ ಆದ ರಾಜೀವ ಕೋಟ್ಯಾನ್ ಮತ್ತು ಅರುಣ್ ಕುಮಾರ್ ಹೆಗಡೆ ಇವರು ಶುಭಾಶಂಸನೆ ಮಾಡಿದರು ಪ್ರಾಂತ್ಯ V ರ ಅಧ್ಯಕ್ಷ ಏಕನಾಥ ಬೋಳಾರ್ ಕಾರ್ಯದರ್ಶಿ ಭೋಜರಾಜ ಶೆಟ್ಟಿ, ಯು ಎಸ್ ಮೋಹನ್‌ದಾಸ್ ಶೆಟ್ಟಿ, ರಜತ್‌ ಹೆಗಡೆ, ಬನ್ನಾಡಿ ಸೋಮನಾಥ್ ಹೆಗಡೆ, ಪುಷ್ಪಲತಾ ಶೆಟ್ಟಿ ವಲಯ IIರಲ್ಲಿ ಬರುವ ಎಲ್ಲಾ ಜಿಲ್ಲಾ ಕ್ಯಾಬಿನೇಟ್ ಸದಸ್ಯರುಗಳು ಹಾಗೂ ಎಲ್ಲಾ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಕ್ಷಗಾನ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಅವರನ್ನು ಹಾಗೂ ವಲಯಾಧ್ಯಕ್ಷ ಶಂಕರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಸ್ಥಾಪಕಾಧ್ಯಕ್ಷ ಸೀತಾರಾಮ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಕ್ಲಬ್‌ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಇವರು ವಲಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿ ಕೋಶಾಧಿಕಾರಿ ಜಯಕರ ಹೆಗಡೆಯವರು ವಂದಿಸಿದರು.

ಗಾಯಕ ರಾಘವೇಂದ್ರ ಎಮ್. ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Click here

Click here

Click here

Click Here

Call us

Call us

Leave a Reply