ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2024 ರ ಸಾಲಿನ ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿ.ಯು ಕಾಲೇಜಿನ ಹಲವು ವಿದ್ಯಾರ್ಥಿಗಳು ದೇಶದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಪೈಕಿ ಈಶಾ ಶೆಟ್ಟಿ 671 ಅಂಕಗಳನ್ನು ಪಡೆದು ಕಾಲೇಜಿಗೆ ಅತ್ಯಧಿಕ ಅಂಕಗಳಿಸಿ ಕೀರ್ತಿಯನ್ನು ತಂದಿರುತ್ತಾಳೆ.
ನಾಗರಾಜ ಉಪ್ಪಾರ 635, ವಿನುತಾ 612, ಅನನ್ಯ ಉಡುಪ 608, ಎಮ್ ಸೃಜನ್ 592, ಸನ್ನಿಧಿ ಕುಲಾಲ್ 590, ವರುಣ್ ಕೆ.ಪಿ 585, ಶಶಾಂಕ್ ಶೆಟ್ಟಿ 585, ಆಶಿತಾ ಪಿ. 584, ನಿರ್ಮಿತಾ ಎನ್.ಡಿ 583, ರಿತಿಕಾ ಶೆಟ್ಟಿ 563, ರುಮೇಝ್ ಶೇಖ್ 560, ರಕ್ಷಾ ಆರ್. ಪೂಜಾರಿ 557, ನಿಶಾ 536, ಆಕಾಶ್ ಕೆ ಶೆಟ್ಟಿ 520, ಸಂಜನ್ ಕೆ 514 ಮತ್ತು ಸಮೃದ್ಧಿ 513 ಆಂಕಗಳನ್ನು ಪಡೆದು ಕುಂದಾಪುರ ತಾಲೂಕಿನಲ್ಲಿ ಎಕ್ಸಲೆಂಟ್ ಪಿ.ಯು ಕಾಲೇಜು ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
► 2024ರ ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಎಕ್ಸಲೆಂಟ್ ಪ.ಪೂ ಕಾಲೇಜು ಇದನ್ನೂ ಓದಿ – https://kundapraa.com/?p=72825 .
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಭೋಧಕೇತ್ತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.










