Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’ ಹೊಸ ಇತಿಹಾಸ ಸೃಷ್ಟಿಸಲಿ: ಡಾ.ಆರ್ ಕೆ ನಾಯರ್
    ಗಲ್ಫ್

    ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’ ಹೊಸ ಇತಿಹಾಸ ಸೃಷ್ಟಿಸಲಿ: ಡಾ.ಆರ್ ಕೆ ನಾಯರ್

    Updated:10/06/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ದುಬೈ:
      ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್  ಅಭಿಪ್ರಾಯಪಟ್ಟರು.

    Click Here

    Call us

    Click Here

    ಒಕ್ಕಲಿಗರ ಸಂಘ ದುಬೈ ಯುಎಇ ವತಿಯಿಂದ  ದುಬೈನ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮಿಯವರ ಆಶಿರ್ವಾದದೊಂದಿಗೆ ನಡೆದ  ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ತಾಯ್ನೆಲದ ಪರ ನಮ್ಮ ಜವಾಬ್ದಾರಿಗಳು’ ಎಂಬ ಧ್ಯೇಯೋದ್ದೇಶದೊಂದಿಗೆ ಒಕ್ಕಲಿಗರ ಸಂಘ ದುಬೈ ಯುಎಇ ಹಮ್ಮಿಕೊಂಡಿರುವ  ‘ವಿಶ್ವ ಪರಿಸರ ದಿನಾಚರಣೆ’ ನಿಜಕ್ಕೂ ಶ್ಲಾಘನೀಯ.  ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ, ಒಕ್ಕಲಿಗರ ಸಂಘದ ಮೂಲಕವೇ ನಡೆಯಲಿ, ನನ್ನ ಸಂಪೂರ್ಣ ಮಾರ್ಗದರ್ಶನ, ಸಹಕಾರ ನಿಮ್ಮ ಜೊತೆ ಸದಾ ಇದೆ’ ಎಂದರು.

    ಕಾರ್ಯಕ್ರಮದ ಆಯೋಜಕರು, ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ ಚನ್ನರಾಯಪಟ್ಟಣ ಅವರು ‌ಮಾತನಾಡಿ, ಡಾ.ಆರ್ ಕೆ ನಾಯರ್ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಘ ಭಾರತದಲ್ಲಿ ಹಾಗೂ ದುಬೈನಲ್ಲೂ ಅರಣ್ಯ ನಿರ್ಮಿಸಲು ಕೈಜೋಡಿಸಲಿದೆ, ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಮಿಯಾವಾಕಿ ಮಾದರಿಯಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸುವ ಮೂಲಕ ಭಾರತದಲ್ಲಿ 100ಕ್ಕೂ ಹೆಚ್ಚಿನ ಅರಣ್ಯಗಳನ್ನು ಸೃಷ್ಟಿಸಿದ ಡಾ.ಆರ್.ಕೆ. ನಾಯರ್, ನಾಸಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಮಂಡನೆ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

    ಮೇಜರ್ ಜನರಲ್ ಒಮರ್ ಮಹಮ್ಮದ್ ಅಲ್ ಮರ್ಝೂಕಿ, ಶಿಕ್ಷಣ ತಜ್ಞ ರಮೇಶ್ ಡ್ಯಾಫೊಡೀಲ್ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಗಿಡಗಳನ್ನು ಸ್ವೀಕರಿಸಿ ಆರೈಕೆ ಮಾಡುವ ಜವಾಬ್ದಾರಿಯೊಂದಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಪಣ ತೊಟ್ಟರು.‌

    ಒಕ್ಕಲಿಗರ ಸಂಘ ದುಬೈ ಸದಸ್ಯ ಹರೀಶ್ ಗೌಡಗಿಡಗಳ ಸಂರಕ್ಷಣೆ, ನರ್ಸರಿ ಗಿಡ, ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ಆಶಿಶ್ ಹರೀಶ್ ಕೋಡಿಯವರ ಕೊಳಲು ವಾದನ, ಸೌಹಾರ್ದ ಲಹರಿ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ, ಅಕ್ಷತ ಜಿ ಆಚಾರ್ಯ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ, ಆಹ್ವಾನಿತರಿಗೆ, ಪ್ರಾಯೋಜಕರಿಗೆ ಒಕ್ಕಲಿಗರ ಸಂಘ ಕೋರ್ ಕಮಿಟಿ ಸದಸ್ಯ ಶಿವಪ್ರಕಾಶ್ ಗೌಡ ಧನ್ಯವಾದ ಅರ್ಪಿಸಿದರು.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕರ್ನಾಟಕ ಸಂಘ ಶಾರ್ಜಾ: ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಅಧಿಕಾರ ಸ್ವೀಕಾರ

    01/07/2026

    ದುಬೈನಲ್ಲಿ ಅದ್ದೂರಿಯಾಗಿ ಜರುಗಿದ ಅಂತರಾಷ್ಟ್ರೀಯ ಜಾನಪದ ಉತ್ಸವ – 25

    12/09/2025

    ಜು.24ರಂದು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

    21/07/2025
    Leave A Reply Cancel Reply

    11 − 6 =

    Call us

    Click Here

    Call us

    Call us

    Call us
    Highest Viewed Recently
    • ಉಡುಪಿ: ವಿದ್ಯಾರ್ಥಿವೇತನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    • ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ನಾಥಪಂಥದ ಪೀರ್‌ ಯೋಗಿ ಜಗದೀಶ್‌ನಾಥ್ ಜೀ ಭೇಟಿ
    • ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ
    • ನಿವೃತ್ತ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕೆ.ಎಸ್. ಅವರಿಗೆ ಅಭಿನಂದನೆ
    • ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.