ಬೀಜಾಡಿ ಸರ್ಕಾರಿ ಪ್ರೌಢಶಾಲೆ: ವಿದ್ಯುನ್ಮಾನ ಮತಯಂತ್ರ ಬಳಸಿ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೀಜಾಡಿಯ ಸೀತಾಲಕ್ಷ್ಮೀ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ ರಚನೆಯು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ವಿದ್ಯುನ್ಮಾನ ಮತಯಂತ್ರ ಬಳಸಿ ನಡೆಸಲಾಯಿತು. 

Call us

Click Here

ಚುನಾವಣಾ ಅಧಿಸೂಚನೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ದಿನಾಂಕ, ಮತ ಎಣಿಕೆ ದಿನಾಂಕ ಇತ್ಯಾದಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲಾಯಿತು. ಅಲ್ಲದೇ ವಿಷೇಷವಾಗಿ ನೋಟಾ ಮತದಾನಕ್ಕೂ  ಅವಕಾಶ ಕಲ್ಪಿಸಲಾಗಿತ್ತು.

ಬೂತ್ ಮಟ್ಟದ ಅಧಿಕಾರಿಗಳಾಗಿ ಪ್ರತೀ ವಿದ್ಯಾರ್ಥಿಗಳಿಗೆ ಮತಚೀಟಿಗಳನ್ನು ನವ್ಯಾ ಮತ್ತು ವಂಶಿ ನೀಡಿದರು. ಪ್ರಿಸೈಡಿಂಗ್ ಅಧಿಕಾರಿಯಾಗಿ ಪ್ರಥ್ವಿ ಮೊಗವೀರ ಹಾಗೂ ಮತದಾನ ಅಧಿಕಾರಿಗಳಾಗಿ ವಿದ್ಯಾರ್ಥಿಗಳಾದ ದೀಕ್ಷಿತ್, ಸಹನಾ ಮತ್ತು ಪೂಜಾ ಕರ್ತವ್ಯ ನಿರ್ವಹಿಸಿದರು.

ಮತದಾನದ ಕಂಟ್ರೋಲ್ ಯುನಿಟ್‌ಗಳನ್ನು ಶಿಕ್ಷಕಿಯರಾದ ವಿಶಾಲಾ ಹಾಗೂ ಲಿಖಿತಾ ಅವರು ನಿರ್ವಹಿಸಿದರು. ಎಲ್ಲಾ  ನಾಲ್ಕು ಅಭ್ಯರ್ಥಿಗಳಿಗೆ ಮತ್ತು ಮತದಾನ ಅಧಿಕಾರಿಗಳಿಗೆ ವಿದ್ಯಾರ್ಥಿ ಮತದಾರರ ಪಟ್ಟಿಯನ್ನು ನೀಡಲಾಗಿತ್ತು. ಮತದಾನ ಕೇಂದ್ರದಲ್ಲಿ  ಗುರುತಿಗಾಗಿ ತಮ್ಮ ಆಧಾರ್ ಅಥವಾ ರೇಶನ್ ಕಾರ್ಡ್ ಹಾಜರುಪಡಿಸುವುದನ್ನು ಕಡ್ಡಾಯ ಮಾಡಲಾಗಿತ್ತು.

ಮತದಾನ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ, ಸಹಿ ಪಡೆಯಲಾಯಿತು.  ಮತದಾನದ ದಿನ ಶಾಲೆಯ 111 ವಿದ್ಯಾರ್ಥಿಗಳಲ್ಲಿ 108 ವಿದ್ಯಾರ್ಥಿಗಳು  ಹಾಜರಿದ್ದು ಮುಕ್ತವಾಗಿ ನ್ಯಾಯಸಮ್ಮತವಾಗಿ ತಮ್ಮ ಮತ ಚಲಾಯಿಸಿದರು. ಮತದಾನ ನೀಡಿದ ಗುರುತಾಗಿ ಎಡಗೈ ತೊರುಬೆರಳಿಗೆ ಅಳಿಸಲಾಗದ ಮಸಿ ಗುರುತು ಹಾಕಲಾಯಿತು.

Click here

Click here

Click here

Click Here

Call us

Call us

ಮತದಾನದ ಸಂದರ್ಭದಲ್ಲಿ ಆಗಬಹುದಾದ ವಿವಿಧ ಸಮಸ್ಯೆಗಳನ್ನು ಪ್ರಾಯೋಗಿಕವಾಗಿ ಅನುಭವ ಮಾಡಿಕೊಡಲಾಯಿತು. ಮತದಾನ ಮುಗಿದ ನಂತರ ಪ್ರಿಸೈಡಿಂಗ್ ಅಧಿಕಾರಿಯವರಿಂದ ಮತದಾನದ ಲೆಕ್ಕಪತ್ರ, ಇನ್ನಿತರ ಸಾಮಗ್ರಿಗಳನ್ನು ಕೌಂಟರಿನಲ್ಲಿ ಪಡೆಯಲಾಯಿತು. ಮತ ಎಣಿಕೆಯು ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಯಿತು.

ಮತ ಎಣಿಕೆಯ ನಂತರ ಚುನಾವಣಾಧಿಕಾರಿಗಳು ವಿಜೇತ ಅಭ್ಯರ್ಥಿಗಳನ್ನು ಘೋಷಿಸಿ ಪ್ರಮಾಣ ಪತ್ರ ನೀಡಿದರು. ಶಾಲಾನಾಯಕನಾಗಿ ಹತ್ತನೇ ತರಗತಿಯ ಸಿದ್ಧಾರ್ಥ, ಶಾಲಾ ಉಪನಾಯಕನಾಗಿ 9ನೇ ತರಗತಿಯ ಶ್ರವಣ್ ಆಯ್ಕೆಯಾದರು.

ನಂತರ ನೂತನ ಶಾಲಾ ಸಂಸತ್ನ ಪ್ರಮಾಣವಚನ ಸಮಾರಂಭ ನಡೆಯಿತು. ಮುಖ್ಯ ಶಿಕ್ಷಕರಾದ ವಿನೋದಾ ಎಂ ಅವರು ರಾಷ್ಟ್ರಪತಿಯಾಗಿ ಕರ್ತವ್ಯ ನಿರ್ವಹಿಸಿ, ಮೊದಲು ಸಭಾಪತಿಯಾದ ವಿಸ್ಮಿತಾ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸಭಾಪತಿಗಳು  ಶಾಲಾ ನಾಯಕ, ಉಪನಾಯಕ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ  ಪ್ರಮಾಣವಚನ ಬೋಧಿಸಿದರು. ಎಲ್ಲರೂ ಶಾಲಾ ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದರು.  ಪ್ರತಿಪಕ್ಷ ನಾಯಕಿಯಾಗಿ ಹತ್ತನೇ ತರಗತಿಯ ತ್ರಿಶಾ ಆಯ್ಕೆಯಾದರು.

ನೂತನ ಶಾಲಾ ಸಂಸತ್‌ನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದರು. ಅವರು ಮಾತನಾಡುತ್ತಾ ಶಾಲೆಯಲ್ಲಿ ಆಯ್ಕೆಯಾದ ನೂತನ ಸಂಸತ್ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ, ನೂತನ ಸಚಿವ ಸಂಪುಟಕ್ಕೆ ಆಯ್ಕೆಯಾದ ಎಲ್ಲಾ ಸದಸ್ಯರೂ ಶಾಲಾ ಸಂವಿಧಾನಕ್ಕೆ ಬದ್ಧರಾಗಿ ತಮ್ಮ ತಮ್ಮ ಜವಾಬ್ಧಾರಿಗಳನ್ನು ನಿರ್ವಹಿಸಿ ಶಾಲೆಯ ದೈನಂದಿನ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಶಾಲೆಗೆ ಕೀರ್ತಿ ತರುವಂತೆ ಶುಭ ಹಾರೈಸಿದರು. 

ರಾಷ್ಟ್ರಪತಿಯವರ ಭಾಷಣದ ಮೇಲೆ ಪ್ರತಿಪಕ್ಷದ ನಾಯಕರ ವಂದನಾ ನಿರ್ಣಯದೊಂದಿಗೆ ಪ್ರಮಾಣವಚನ ಸಮಾರಂಭ ಮುಕ್ತಾಯಗೊಂಡಿತು. ಚುನಾವಣಾ ಪ್ರಕ್ರಿಯೆಯಲ್ಲಿ  ಶಾಲಾ ಶಿಕ್ಷಕರಾದ ಮೈಕ್ರೋ ಅಬ್ಸರ್ವರ್ ಆಗಿ ಭಾಗ್ಯಲಕ್ಷ್ಮಿ, ಆಫೀಸರ್ ಆಗಿ ಮಮತಾ ಸೆಕ್ಟರ್, ಸೆಕ್ಯೂರಿಟಿ ಚೀಫ್ ಆಗಿ ಉದಯ ಮೊಗವೀರ ಹಾಗೂ  ಪ್ರೇಮಾ ಮತ್ತು ಮಹಾರುದ್ರಪ್ಪ, ತಾಂತ್ರಿಕ ಸಹಕಾರದ ಜೊತೆಗೆ ಮತ ಎಣಿಕೆಯಲ್ಲಿ ಸಹಕರಿಸಿದರು.

ಶಾಲಾ ವಿದ್ಯಾರ್ಥಿ ಸಂಸತ್‌ನ ಚುನಾವಣಾಧಿಕಾರಿಗಳಾಗಿ ಸುಪ್ರಿಯಾ ಕರ್ತವ್ಯ ನಿರ್ವಹಿಸಿದರು. ಸಚಿವಾಲಯದ ಅಧಿಕಾರಿಗಳಾಗಿ ಸಿಂಚನಾ ಮತ್ತು ಕೃತಿಕಾ ಕರ್ತವ್ಯ ನಿರ್ವಹಿಸಿದರು. ಇಡೀ ಚುನಾವಣಾ ಪ್ರಕ್ರಿಯೆಯ ಸಂಘಟನೆಯನ್ನು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಡಾ. ಸದಾನಂದ ಬೈಂದೂರ್ ಹಾಗೂ ನಟರಾಜ್ ನಿರ್ವಹಿಸಿದರು.                     

Leave a Reply