ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸೌತ್ ಕೆನರಾ ಫೊಟೋಗ್ರಾರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ಕುಂದಾಪುರ-ಬೈಂದೂರು ವಲಯ ಹಾಗೂ ಕಾರ್ಮಿಕ ಇಲಾಖೆ ಉಡುಪಿ ಉಪವಿಭಾಗ ಇವರ ವತಿಯಿಂದ ಮಾಹಿತಿ ಕಾರ್ಯಗಾರ ಮತ್ತು ಇ-ಶ್ರಮ್ ನೋಂದಣಿ ಕಾರ್ಯಕ್ರಮ ಮಂಗಳವಾರ ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ಉಡುಪಿ ಉಪವಿಭಾಗ ಉಡುಪಿ ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಆರ್. ಉದ್ಘಾಟಿಸಿ ಮಾತನಾಡಿ ಪೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರುಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ ಉತ್ತಮ ಕಾರ್ಯಕ್ರಮ, ಅಸಂಗಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಫೋಟೋಗ್ರಾರ‍್ಸ್ ನೋಂದಾವಣೆ ಮಾಡಿಕೊಳ್ಳುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಕುಂದಾಪುರ ಪುರಸಭೆ ಮುಖ್ಯ ಅಧಿಕಾರಿ ಎಂ. ಮಂಜುನಾಥ , ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ವಿಜಯೇಂದ್ರ ಕೆ., ಸೌತ್ ಕೆನರಾ ಫೊಟೋಗ್ರಾರ್ಸ್ ಅಸೋಸಿಯೇಶನ್ ಕುಂದಾಪುರ – ಬೈಂದೂರು ವಲಯ ಅಧ್ಯಕ್ಷ ದಿವಾಕರ ಶೆಟ್ಟಿ, ಕುಂದಾಪುರ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ., ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಗಣೇಶ್ ಬೆನಕ, ಸೌತ್ ಕೆನರಾ ಫೊಟೋಗ್ರಾರ್ಸ್ ಅಸೋಸಿಯೇಶನ್ ಕುಂದಾಪುರ-ಬೈಂದೂರು ವಲಯದ ಗೌರವಾಧ್ಯಕ್ಷ ಶ್ರೀಧರ ಹೆಗ್ಡೆ, ಸಲಹಾ ಸಮಿತಿ ಅಧ್ಯಕ್ಷ ದಿನೇಶ್ ಗೋಡೆ, ಉಪಾಧ್ಯಕ್ಷ ಸುರೇಶ್ ಮೊಳಹಳ್ಳಿ, ನಿಕಟಪೂರ್ವ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಉಪಸ್ಥಿತರಿದ್ದರು.
ಪ್ರಮೋದ್ ಚಂದನ್ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ ಶೇಟ್ ಪ್ರಾರ್ಥನೆ ಮಾಡಿ ಸೌತ್ ಕೆನರಾ ಫೊಟೋಗ್ರಾರ್ಸ್ ಅಸೋಸಿಯೇಶನ್ ಕುಂದಾಪುರ-ಬೈಂದೂರು ವಲಯದ ಕೋಶಾಧಿಕಾರಿ ಹಂಗಳೂರು ಹರೀಶ್ ಪೂಜಾರಿ ಧನ್ಯವಾದ ಮಾಡಿದರು.