ಅಂಪಾರು: ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಸೋಮವಾರ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

Call us

Click Here

ಪುಟಾಣಿಗಳು ಸಂತರು, ಗುರುಗಳ ಪೋಷಾಕು ಧರಿಸಿ, ಗುರುವಿನ ಮಹತ್ವ, ಗುರುಪೂರ್ಣಿಮೆಯ ಅರ್ಥವನ್ನು ಭಾಷಣ, ನೃತ್ಯ, ಹಾಡುಗಳು ಮೂಲಕ ಪ್ರಸ್ತುತ ಪಡಿಸಿದರು.

ಶಾಲಾ ಆಡಳಿತಾದಿಕಾರಿ ಚೈತ್ರ ಯಡಿಯಾಳ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ತಮ್ಮ ವೃತ್ತಿ ಜೀವನಕ್ಕೆ ನ್ಯಾಯ ಒದಗಿಸಲು ಅನೇಕ ತ್ಯಾಗ ಮಾಡಿರುತ್ತಾರೆ ಅವರಿಗೆ ಗೌರವ, ಪ್ರೀತಿ, ತೋರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು ಮತ್ತು  ಪುರಾಣ ಪ್ರಸಿದ್ಧ ಗುರು ಶಿಷ್ಯರ ಕಥೆ ಹೇಳುವ ಮೂಲಕ ಗುರುವಿನ ಮಹಿಮೆ ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಆಚರಣೆಗೆ ಮತ್ತಷ್ಟು ಮೆರಗು ನೀಡಿದರು.

ಮುಖ್ಯ ಅತಿಥಿಗಳಾಗಿ ಟ್ರಸ್ಟ್‌ನ ಅದ್ಯಕ್ಷರಾದ ಬಲಾಡಿ ಸಂತೋಷ ಕುಮಾರ ಶೆಟ್ಟಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು ಈ ಸಂಸ್ಥೆಯು ಕಳೆದ ಒಂದು ವರ್ಷದಿಂದ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ಅನೇಕ ಸಹಪಠ್ಯ ಚಟುವಟಿಕೆಗಳ ತರಬೇತಿ ನೀಡುತ್ತಾ ಸುತ್ತ ಮುತ್ತಲಿನ ಪರಿಸರದ ಮಕ್ಕಳಿಗೆ ಕೈಗೆಟುಕುವ ಶುಲ್ಕದಲ್ಲಿ ಗಗನ ಕುಸುಮವಾದ ಉತ್ತಮ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಾ ಬಂದಿದೆ.

Leave a Reply