ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ತ್ರಾಸಿ ಶಾಖೆಯಲ್ಲಿ ನಿವೃತ್ತಿ ಹೊಂದಿದ ತಿಲೋತ್ತಮೆ ಅವರಿಗೆ ಬೀಳ್ಕೊಡುಗೆ ಸಮಾರಂಭ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ತ್ರಾಸಿ ಶಾಖೆಯಲ್ಲಿ ನಡೆಯಿತು.
ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ, ಸಮ್ಮಾನಿಸಿ, ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪ್ಪುಂದ ಶಾಖೆಯ ಸೀನಿಯರ್ ಮ್ಯಾನೇಜರ್ ಶಂಕರ ಶೆಟ್ಟಿ ಅಭಿನಂದನ ಭಾಷಣ ಮಾಡಿದರು.
ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ, ಸಂದೀಪ ಶೆಟ್ಟಿ ಮರವಂತೆ – ಬಡಾಕೆರೆ ವಿಎಸ್‌ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳಗದ್ದೆ ಬೈಂದೂರು ಶಾಖೆಯ ವ್ಯವಸ್ಥಾಪಕ ವೆಂಕಟೇಶ ಬಿಲ್ಲವ, ನೇರಳಕಟ್ಟೆ ಶಾಖೆಯ ವ್ಯವಸ್ಥಾಪಕ ಸತೀಶ ಶೆಟ್ಟಿ, ನಾಗೂರು ಶಾಖೆಯ ವ್ಯವಸ್ಥಾಪಕ ವಿಜಯ ಕುಮಾರ ಶೆಟ್ಟಿ, ಗಂಗೊಳ್ಳಿ ಶಾಖೆಯ ವ್ಯವಸ್ಥಾಪಕ ಸುಬ್ರಹ್ಮಣ್ಯ, ತಲ್ಲೂರು ಶಾಖೆಯ ವ್ಯವಸ್ಥಾಪಕ ವಿಜಯ ಕುಮಾರ್ ಶೆಟ್ಟಿ, ಮಹೇಶ ಶಿರೂರು, ಉಪ್ಪುಂದ ಶಾಖೆಯ ಸಿಬಂದಿ ಸುಕೇಶ ಶೆಟ್ಟಿ, ಗೋಪಾಲ, ಶಿರೂರು ಶಾಖೆ ಸಿಬಂದಿ ನಾಗರಾಜ ಕೊಠಾರಿ, ಕೊಲ್ಲೂರು ಶಾಖೆ ಸಿಬಂದಿ ಶಶಿಕಲಾ, ವಂಡ್ಸೆ ಶಾಖೆ ಸಿಬಂದಿ ಲೋಕನಾಥ ಶೆಟ್ಟಿ, ತ್ರಾಸಿ ಶಾಖೆ ಸಿಬಂದಿ ಪದ್ಮನಾಭ, ಪ್ರೇಮಾ, ನವೋದಯ ಸಂಘದ ಪ್ರೇರಕಿ ಶ್ಯಾಮಲಾ, ನಿವೃತ್ತ ಸಿಬಂದಿ ವಿಮಲ ಕುಲಾಲ್ ಹಾಗೂ ತ್ರಾಸಿ ಶಾಖೆಯ ಗ್ರಾಹಕರು ಉಪಸ್ಥಿತರಿದ್ದರು.
ತ್ರಾಸಿ ಶಾಖಾ ವ್ಯವಸ್ಥಾಪಕ ಅಶೋಕ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ನವೋದಯ ಸಂಘದ ಪ್ರೇರಕ ವಾಸುದೇವ ನಿರೂಪಿಸಿದರು. ಶಾಖೆಯ ಅಧಿಕಾರಿ ಗಣೇಶ ಭಟ್ ಪರಿಚಯ ಪತ್ರ ವಾಚಿಸಿದರು. ಸಿಬಂದಿ ಮಂಜುನಾಥ ವಂದಿಸಿದರು.










