ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಳ್ಳಾಡಿಯ ಯುವ ನಿರೂಪಕ ನಿತಿನ್ ಶೆಟ್ಟಿ ಅವರಿಗೆ ಟಿಎನ್‌ಐಟಿ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ಸ್ 2024ರಲ್ಲಿ ಅವರ ಹಿನ್ನೆಲೆ ಧ್ವನಿಗಾಗಿ ಬೆಸ್ಟ್ ವಾಯ್ಸ್ ಓವರ್ ಪ್ರಶಸ್ತಿ ಲಭಿಸಿದೆ.

ಮೂಲತಃ ಕುಂದಾಪುರದ ಬೇಳೂರು ಗ್ರಾಮದ ಗುಳ್ಳಾಡಿಯವರಾಗಿದ್ದು, ಅದ್ಭುತ ಕಂಠಸಿರಿ, ಇಂಪಾದ ಹಿನ್ನೆಲೆ ಧ್ವನಿ ಯೊಂದಿಗೆ ಮನೆ ಮಾತಾಗಿರುವ ನಿತಿನ್ ಶೆಟ್ಟಿ ಟಿವಿ9 ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.










