ಉಪ್ಪುಂದ  ಶ್ರೀ ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ  ಮಹಾಸಭೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದದ  ಶ್ರೀ ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ  ನಿ. 2023-24ನೇ ಮಹಾಸಭೆ ಬುಧವಾರ ಹೋಟೆಲ್  ಪರಿಚಯದ ದೇವಕಿ ಸಭಾಭವನದಲ್ಲಿ ನಡೆದಿದೆ.

Call us

Click Here

ಸಂಘದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು ರೂಪಾಯಿ 20.44 ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ. ಪ್ರಧಾನ ಕಚೇರಿ ಉಪ್ಪುಂದ ಹಾಗೂ ಬೈಂದೂರು ಶಾಖೆ, ತ್ರಾಸಿ ಶಾಖೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಬೈಂದೂರು ಶಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಜಯರಾಮ ಶೆಟ್ಟಿ, ರಾಘವೇಂದ್ರ ಎಂ. ಪೂಜಾರಿ, ದೇವನ್‍ ಕೆ. ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಗಿರೀಶ್ ಹೊಳ್ಳ, ಮಾಚಯ್ಯ ಬಿಲ್ಲವ ಉಪಸ್ಥಿತರಿದ್ದರು.

ಬೈಂದೂರು ಶಾಖೆಯ ವ್ಯವಸ್ಥಾಪಕ ನಾಗರಾಜ್ ಪಿ. ವಾರ್ಷಿಕ  ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಆರ್. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ನಿರ್ದೇಶಕರಾದ ಜಯರಾಮ್ ಶೆಟ್ಟಿ ಅವರು ಸ್ವಾಗತಿಸಿದರು. ತ್ರಾಸಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಆಚಾರ್ಯ ವಂದಿಸಿದರು.

Leave a Reply