ಕೋಟೇಶ್ವರ: 12ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಈ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಹಾಗೂ ಪೋಷಕರಾದವರು ವಿದ್ಯಾಭ್ಯಾಸಕ್ಕೆ ಇತಂಹ ಸರಕಾರಿ ಸಂಸ್ಥೆಗೆ ಸೇರಿಸಬೇಕೆಂದು ಹೇಳಿ ಇಲ್ಲಿರುವ ಶೈಕ್ಷಣಿಕ ಗುಣಮಟ್ಟದ  ಬಗ್ಗೆ ಬೇರೆ ಪೋಷಕರಿಗೆ ಮನವರಿಕೆ ಮಾಡಿದರೆ ಈ ಸಂಸ್ಥೆಗೆ ಸೇರಿಸಬೇಕೆಂದು ಬೇರೆ ಪೋಷಕರಿಗೆ ಭರವಸೆ ಬರುತ್ತದೆ.

Call us

Click Here

ಹನ್ನೆರಡು ವರ್ಷದ  ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಅತಂಹ ಕಾಲಘಟ್ಟದಲ್ಲಿ ಈ ಪ್ರತಿಭಾ ಪುರಸ್ಕಾರ ಶುರುಮಾಡಿ ದಶಕಗಳವರೆಗೆ ಮುನ್ನೆಡೆಸಿಕೊಂಡು ಬಂದಿರುವ ಸ್ನೇಹ ಸಂಗಮ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಫ್ರೌಡಶಾಲಾ ವಿಭಾಗದ ವೈಸ್ ಪ್ರಿನ್ಸಿಪಾಲ್ ಚಂದ್ರಶೇಖರ ಶೆಟ್ಟಿ  ಹೇಳಿದರು.

ಅವರು 2002-03 ಸಾಲಿನ ಹಳೇ ವಿದ್ಯಾರ್ಥಿ ಸಂಘ ಸ್ನೇಹ ಸಂಗಮ ವತಿಯಿಂದ ಶಾಲಾ ಸಭಾಭವನದಲ್ಲಿ ಜರುಗಿದ 12ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದರು.

ಸ್ನೇಹ ಸಂಗಮದ ಅಧ್ಯಕ್ಷ ಗಿರೀಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ನಾಯ್ಕ್ ಪ್ರತಿಭಾನ್ವಿತರಿಗೆ ಪ್ರೂತ್ಸಾಹಧನ ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ರವಿ ದೇವಾಡಿಗ, ಯೋಗೀಶ್ ದೋಡ್ಡೋಣಿ, ರಾಘವೇಂದ್ರ ಎಸ್. ಬೀಜಾಡಿ, ಶಾಲಾ ವಿದ್ಯಾರ್ಥಿ ನಾಯಕ ಸುಮುಖ್, ನಾಯಕಿ ನಕ್ಷಾ ಉಪಸ್ಥಿತರಿದ್ದರು.

ಸ್ನೇಹ ಸಂಗಮ ವತಿಯಿಂದ ಕಲಿಕೆ, ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲಿನ ಪ್ರತಿಭಾನ್ವಿತ ಮಕ್ಕಳಿಗೆ ಒಟ್ಟು 30,240 ಮೊತ್ತದ ಪ್ರೋತ್ಸಾಹ ಧನವನ್ನು ನೀಡಲಾಯಿತು.

Click here

Click here

Click here

Click Here

Call us

Call us

ಶಿಕ್ಷಕಿ ದಿವ್ಯ ಪ್ರಭಾ ಅವರು ಸ್ವಾಗತಿಸಿದರು ಶಿಕ್ಷಕಿ ಸುಧಾ ನಾಯಕ ಅವರು ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಶಿಕ್ಷಕರಾದ ಭಾಷಾ ಹಸನ್‍  ಸಾಬ್‍  ವಂದಿಸಿದರು. ಶಿಕ್ಷಕರಾದ ರಮಾನಂದ ನಾಯಕ ಕಾರ್ಯಕ್ರಮ  ನಿರೂಪಿಸಿದರು.

Leave a Reply