ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ಅವರ ನಿರ್ದೇಶನದಂತೆ ಒಂದು ದಿನದ ಪ್ರಥಮ ಭಾಷಾ ಶಿಕ್ಷಕರ ಕಾರ್ಯಗಾರವು ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಿ. ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈ ಅವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಕರು ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತೀಕರಿಸಬೇಕು ಎಂದು ಹೇಳಿದರು ಹಾಗೂ ಉಡುಪಿ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶಕ್ಕಾಗಿ ಶಿಕ್ಷಕರನ್ನು ಅಭಿನಂದಿಸಿದರು.
ಕುಂದಾಪುರ ವಲಯದ ಇ. ಸಿ. ಓ ಆಗಿರುವ ಶೇಖರ್ ಅವರು ಕಾರ್ಯಗಾರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಷಾ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಜಯಶೀಲ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಅಲ್ಬಾಡಿ ಆರ್ಡಿ, ಹರಿಶ್ಚಂದ್ರ ಸಹಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಹಾಲಾಡಿ ಹಾಗೂ ರಮೇಶ್ ಕುಲಾಲ್, ಸಹಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆದೂರು ಇವರುಗಳು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಉತ್ತೀರ್ಣಗೊಳಿಸುವಲ್ಲಿ ಶಿಕ್ಷಕರು ಕೈಗೊಳ್ಳುವ ಕಾರ್ಯ ತಂತ್ರದ ಬಗ್ಗೆ ವಿವರಣೆಯನ್ನು ನೀಡಿದರು.
ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ ಅವರು ಸ್ವಾಗತಿಸಿ, ಸಹಶಿಕ್ಷಕರಾದ ಪದ್ಮನಾಭ ಅಡಿಗ ಅವರು ವಂದಿಸಿದರು. ಸಹಶಿಕ್ಷಕಿ ಆಶಾ ಬಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.