ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2024-25ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಪ್ರೌಢ ಶಾಲಾ ಶಿಕ್ಷಕ ವಿಭಾಗದಲ್ಲಿ ಬೈಂದೂರು ವಲಯದಿಂದ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಮಂಜುನಾಥ ಶೆಟ್ಟಿ, ಕುಂದಾಪುರ ವಲಯದಿಂದ ಬಿದ್ಕಲ್‌ಕಟ್ಟೆ ಕೆ. ಪಿ. ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಕರುಣಾಕರ ಶೆಟ್ಟಿ, ಬ್ರಹ್ಮಾವರ ವಲಯದಿಂದ ಕೋಡಿಕನ್ಯಾನ ಸೋಮಬಂಗೇರ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿಯಾದ ಜ್ಯೋತಿ ಕೃಷ್ಣ ಪೂಜಾರಿ, ಉಡುಪಿ ವಲಯದಿಂದ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಹ ಶಿಕ್ಷಕಿಯಾದ ಮಾಲತಿ ವಕ್ವಾಡಿ ಹಾಗೂ ಕಾರ್ಕಳ ಶಿವಪುರ ಚಿತ್ರಕಲಾ ಶಿಕ್ಷಕರಾದ ಕಮಲ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ► ಕುಂದಾಪುರ: ರಾಮಕೃಷ್ಣ ಬಿ. ಜಿ. ಅವರಿಗೆ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿ – https://kundapraa.com/?p=76098
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬೈಂದೂರು ವಲಯದಿಂದ ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಜಯಾನಂದ ಪಟಗಾರ, ಕುಂದಾಪುರ ವಲಯದಿಂದ ಹಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸೀತಾರಾಮ ಶೆಟ್ಟಿ, ಬ್ರಹ್ಮಾವರ ವಲಯದ ಕೊಕ್ಕರ್ಣಿ ಕೆ.ಪಿ.ಎಸ್ ಸಹ ಶಿಕ್ಷಕರಾದ ಭಾಸ್ಕರ ಪೂಜಾರಿ, ಉಡುಪಿ ವಲಯದಿಂದ ಸಾಂತರುಕೊಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಹಾಗೂ ಕಾರ್ಕಳ ಶಾಲೆಯ ಶಿಕ್ಷಕಿಯಾದ ಶಶಿಕಲಾ ನಾರಾಯಣ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಬೈಂದೂರು ವಲಯದಿಂದ ಬಾರಂದಾಡಿ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕಿಯಾದ ಅಮಿತಾ ಬಿ., ಕುಂದಾಪುರ ವಲಯದಿಂದ ಗೋಪಾಡಿ ಪಡು ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕರಾದ ಶ್ರೀನಿವಾಸ ಶೆಟ್ಟಿ, ಬ್ರಹ್ಮಾವರ ವಲಯದಿಂದ ಹೈಕಾಡಿ ಸ.ಹಿ.ಪ್ರಾ ಶಾಲೆಯ ದೈಹಿಕ ಶಿಕ್ಷಕರಾದ ರವಿರಾಜ ಶೆಟ್ಟಿ, ಉಡುಪಿ ವಲಯದಿಂದ ಮಲ್ಲಾರು ಉರ್ದು ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿಯಾದ ಖಾತುನ್ ಬಿ. ಕುಚ್ಚೂರು ಸ.ಕಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಮಾಲಿನ ಅವರು ಆಯ್ಕೆಯಾಗಿದ್ದಾರೆ.