ಬೈಂದೂರು ಸೇವಾ ಸಂಗಮ ಶಿಶುಮಂದಿರದ ವತಿಯಿಂದ ಮುದ್ದುರಾಧ ಮತ್ತು ಮುದ್ದುಕೃಷ್ಣ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸೇವಾ ಸಂಗಮ ಶಿಶುಮಂದಿರ ಇದರ ಆಶ್ರಯದಲ್ಲಿ ಶಿಶು ಮಂದಿರದ ಪುಟಾಣಿಗಳಿಂದ 40ನೇ ವರ್ಷದ ಮುದ್ದುರಾದ ಮತ್ತು ಮುದ್ದುಕೃಷ್ಣ ವೇಷಗಳ ಪ್ರದರ್ಶನ ಹಾಗೂ ನೃತ್ಯ ಮತ್ತು ಅಭಿನಯಗಳ ಕಾರ್ಯಕ್ರಮ ನೆರವೇರಿತು.

Call us

Click Here

ಕಾರ್ಯಕ್ರಮದ ವಿಶೇಷ  ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಸೇವಾ ಸಂಗಮ ಟ್ರಸ್ಟ್ ಇದರ  ವಿಶ್ವಸ್ತರಾದ ರಿಷಿರಾಜ್ ಸಾಸ್ತಾನ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಸ್ತುತ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಸಿ ಪಾಲಕರು ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎಳೆವೆಯಲ್ಲಿಯೇ ನೀಡುವ ಉದ್ದೇಶದಿಂದ ಇಂತಹ ಶಿಶುಮಂದಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂದು ಕರೆ ನೀಡಿದರು.

ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮ ಬೈಂದೂರು ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಅವರು ಸಹಕರಿಸಿದ ಸರ್ವರಿಗೂ ವಂದಿಸಿ, ಸಂಸ್ಥೆ ಏಳಿಗೆ ಹಾಗೂ ಕಾರ್ಯಚಟುವಟಿಕೆಯಲ್ಲಿ ಸರ್ವ ಪಾಲಕರ ಸಹಕಾರ ಕೋರಿದರು. ವೇದಿಕೆಯಲ್ಲಿ ಸೇವಾ ಸಂಗಮದ ಉಪಾಧ್ಯಕ್ಷರಾದ ರವೀಂದ್ರ ಶಾನುಭಾಗ್ ಮತ್ತು ವ್ಯವಸ್ಥಾಪಕರಾದ ದಿನೇಶ್ ಪಡುವರಿ  ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಆದ ಬೈಂದೂರು ಸೀತಾರಾಮಚಂದ್ರ, ದೇವಸ್ಥಾನದ ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬೈಂದೂರು ಸಂಸ್ಥೆಯು ಉಪಾಧ್ಯಕ್ಷ ಸುಧಾಕರ್ ಪಿ. ಕಾರ್ಯಕ್ರಮ ನಿರೂಪಿಸಿ, ಸೇವಾ ಸಂಗಮದ ಆಶಾದಿನೇಶ್ ಸ್ವಾಗತವನ್ನು ನೆರವೇರಿಸಿ, ಉಪಾಧ್ಯಕ್ಷೆ ಆಶಾ ಕಿಶೋರ್  ಧನ್ಯವಾದ ಗೈದರು.

Click here

Click here

Click here

Click Here

Call us

Call us

Leave a Reply