ಸೆ.6ರಿಂದ ಮಡಗಾಂವ್- ವೆಲಂಕಣಿ ವಿಶೇಷ ರೈಲು ಸಂಚಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಮಿಳುನಾಡಿನ ವೆಲಂಕಣಿಯಲ್ಲಿರುವ ಚರ್ಚಿಗೆ ತೆರಳು ಅನುಕೂಲವಾಗುವಂತೆ ಮಡಗಾಂವ್- ವೆಲಂಕಣಿ ನಡುವೆ ಸೆಪ್ಟೆಂಬರ್ 6ಕ್ಕೆ ವಿಶೇಷ ರೈಲು ಸಂಚರಿಸಲಿದೆ.

Call us

Click Here

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ಕೊಂಕಣ ರೈಲ್ವೆ ಈ ಆದೇಶ ಹೊರಡಿಸಿದೆ.

ರೈಲು ಸೆಪ್ಟಂಬರ್ 6ರ ಮಧ್ಯಾಹ್ನ 12:30ಕ್ಕೆ ಮಡಗಾಂವ್ ನಿಂದ ಹೊರಡಲಿದ್ದು  3:36ಕ್ಕೆ  ಬೈಂದೂರು,  4:18ಕ್ಕೆ ಕುಂದಾಪುರ, 4:42ಕ್ಕೆ ಉಡುಪಿ, 5:30ಕ್ಕೆ ಸುರತ್ಕಲ್, ಸಂಜೆ 6ಕ್ಕೆ ಮಂಗಳೂರು ಜಂಕ್ಷನ್ ಆಗಿ ಕಾಸರಗೋಡು ಪಯ್ಯನೂರು ಮೂಲಕ ರಾತ್ರಿ 11:14ಕ್ಕೆ ಶಿರೂರು ನಿಲ್ದಾಣ, ಸೆಪ್ಟೆಂಬರ್ 7ರ ಬೆಳಿಗ್ಗೆ 8:28ಕ್ಕೆ ತಿರುಚಿರಪಳ್ಳಿ ಮಧ್ಯಾಹ್ನ 12:25 ಕ್ಕೆ ವೆಲಂಕಣಿಗೆ ತಲುಪಲಿದೆ.

ಸೆಪ್ಟೆಂಬರ್ 7ರ ರಾತ್ರಿ 11:55ಕ್ಕೆ ವೆಲಂಕಣಿಯಿಂದ ಹೊರಟು ಮಂಗಳೂರು, ಉಡುಪಿ, ಕುಂದಾಪುರ, ಕಾರಾವರ ಮೂಲಕ ಸಂಚರಿಸಲಿದೆ.

ಈ ರೈಲು ಸಂಚಾರ ಆರಂಭದಿಂದ ಕರಾವಳಿ ಭಾಗದ ಕ್ರೈಸ್ತರಿಗೆ ವೆಲಂಕಣಿಯ ವಾರ್ಷಿಕ ಹಬ್ಬಕ್ಕೆ ತೆರಳಲು ಅನುಕೂಲವಾಗಲಿದೆ.

Click here

Click here

Click here

Click Here

Call us

Call us

ಅನೇಕ ಸಮಯಗಳಿಂದ ಮಡಗಾಂವ್- ವೆಲಂಕಣಿ ಮಧ್ಯೆ ರೈಲು ಸಂಚಾರ ಆರಂಭಕ್ಕೆ ಬೇಡಿಕೆ ಇದ್ದು, ಇದಕ್ಕೆ ಸ್ಪಂಧಿಸಿದ ಸಂಸದರಿಗೆ ಕುಂದಾಪುರ ಭಾಗದ ಕ್ರೈಸ್ತರು ಹಾಗೂ ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಕೃತಜ್ಞತೆ ಸಲ್ಲಿಸಿದೆ.

Leave a Reply