Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟೇಶ್ವರ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ
    ಊರ್ಮನೆ ಸಮಾಚಾರ

    ಕೋಟೇಶ್ವರ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ

    Updated:17/09/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಪ್ರಾಪಂಚಿಕವಾಗಿ ನಮ್ಮ ದೇಹ ಮತ್ತು ಮನಸ್ಸು ಇಲ್ಲಿ ಇರಬೇಕಾದರೆ ನಮ್ಮ ತಂದೆ ತಾಯಿಯ ಒಂದೊಂದು ಜೀವಕೋಶಗಳನ್ನು ನಾವು ಪಡೆದಿರುತ್ತೇವೆ, ತಂದೆ ತಾಯಿ ಇದ್ದರೆ ಮಾತ್ರ ನಾವೆಲ್ಲಾ. ಈ ಸೃಷ್ಟಿಯ ಆದಿಯಲ್ಲಿ ಅದೆಷ್ಟೋ ಜೀವ ಕಣಗಳಿದ್ದು, ಇಲ್ಲಿ ನಮ್ಮನ್ನು ನಾವು ಹಿಂದಿರುಗಿ ಹುಡುಕಿಕೊಂಡು ಹೋದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಲ್ಲಿ ನಾವು ದೇವರನ್ನು ಕಾಣಬೇಕು ಇದೇ ಸೃಷ್ಟಿಕರ್ತ ವಿಶ್ವಕರ್ಮ. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮ ಎನ್ನುವುದಿದ್ದರೇ ಅದು ವಿಶ್ವಕರ್ಮ ಧರ್ಮ ಎಂದು ಮಂಗಳೂರಿನ ಅಜಲಸ್ ಡಯಾಗ್ನಾಸ್ಟಿಕ್ಸ್ ಇಲ್ಲಿನ ಡಾ| ಚಂದ್ರಯ್ಯ ಆಚಾರ್ಯ ಅವರು ಹೇಳಿದರು.

    Click Here

    Call us

    Click Here

    ಅವರು ಕೋಟೇಶ್ವರ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಹಾಗೂ ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

    ಅರಿವೇ ಗುರು, ಗುರುವಿನಲ್ಲಿ ದೇವರನ್ನು ಕಾಣುತ್ತಿದ್ದೇವೆ . ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಶಾಲಾ ಕಾಲೇಜಿನಲ್ಲಿ ಏನು ಶಿಕ್ಷಣವನ್ನು ಪಡೆಯುತ್ತೇವೆ. ಧಾರ್ಮಿಕವಾಗಿ ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಅದು ನಮ್ಮ ಸಮುದಾಯದ ಮೂಲಕವಾಗಿಯೇ ಪಡೆಯಬೇಕಾಗುತ್ತದೆ. ವಿಶ್ವಕರ್ಮ ಸಮುದಾಯವು ನಮ್ಮ ಧಾರ್ಮಿಕ ಆಚರಣೆ ಹಾಗೂ ವೈಯಕ್ತಿಕ ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ನಮ್ಮ ದೇಹ ಮತ್ತು ಮನಸ್ಸನ್ನು ಹೇಗೆ ನಮ್ಮ ಮುಂದಿನ ಜೀವನಕ್ಕೆ ಅನುವು ಮಾಡಬೇಕು ಎನ್ನುವ ಬಗ್ಗೆ ಧರ್ಮ ಗುರುಗಳ ಮಾರ್ಗದರ್ಶನ ಬಹಳ ಮುಖ್ಯವಾಗಿದೆ . ಈ ನಿಟ್ಟಿನಲ್ಲಿ ಸರಿಯಾದ ಸಮಾಜವನ್ನು ರೂಪಿಸಬೇಕಿದ್ರೆ ಅದರಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಶಿಲ್ಪಿ ವಿಠಲ ಆಚಾರ್ಯ, ಬಸ್ರೂರು ಅವರನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಚಿತ್ರಕಲಾ ಕಲಾವಿದ ಧನುಷ್ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಇದರ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ಹಿಂದಿನಿಂದಲೂ ಶ್ರೀ ವಿಶ್ವಕರ್ಮ ಪೂಜೆಯನ್ನು ವಿಶ್ವಕರ್ಮ ಯುವಕ ದಳದವರು ನಡೆಸಿಕೊಂಡು ಬಂದಿದ್ದಾರೆ. ಇಡೀ ವಿಶ್ವಕ್ಕೆ  ವಿಶ್ವಕರ್ಮರ ಕೊಡುಗೆ ಅಪಾರವಾಗಿದು, ಈ ನಡುವೆ ಬದಲಾದ ಕಾಲಮಾನಕ್ಕೆ ನಾವುಗಳು ಹೊಂದಿಕೊಂಡು ನಮ್ಮ ಅತ್ಯಮೂಲ್ಯವಾದ ಧರ್ಮ ಸಂಸ್ಕೃತಿ ಹಾಗೂ ಕಲೆಗಳನ್ನು ಬೆಳೆಸಿಕೊಂಡು ಹೋಗುವ ಮೂಲಕ ನಾವೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.

    Click here

    Click here

    Click here

    Click Here

    Call us

    Call us

    ಕೋಟೇಶ್ವರ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಇದರ ಅಧ್ಯಕ್ಷ ಸುರೇಶ ಆಚಾರ್ಯ ಸಾಂತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಭಾಸಿ ವೇ|ಮೂ| ಪುರೋಹಿತ್ ರೋಹಿತಾಕ್ಷ ಆಚಾರ್ಯ ಅವರು ಶುಭಾಶಂಸನೆಗೈದರು.  

    ಕಾರ್ಯಕ್ರಮದಲ್ಲಿ ಕಾರವಾರ ಕೊಂಕಣ ರೈಲ್ವೆಯ ನಾಗೇಂದ್ರ ಆಚಾರ್ಯ ತಲ್ಲೂರು, ಕೋಟೇಶ್ವರ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಇದರ ಗೌರವಾಧ್ಯಕ್ಷ  ಸತೀಶ್ ಆಚಾರ್ಯ ಹೊದ್ರಾಳಿ, ಕೋಟೇಶ್ವರ ಶ್ರೀ ದೇವಿ ಮಹಿಳಾ ಮಂಡಳಿ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ , ಕಾರ್ಯದರ್ಶಿ ಪ್ರಕಾಶ ಆಚಾರ್ಯ ಅರಸರಬೆಟ್ಟು , ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಇದರ ನಿಯೋಜಿತ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಿಸಲಾಯಿತು.

    ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ ಆಚಾರ್ಯ ಅರಸರಬೆಟ್ಟು ವರದಿ ವಾಚಿಸಿ, ಶಿಲ್ಪಿ ದಿನೇಶ್ ಆಚಾರ್ಯ ಸಾಂತಾವರ ಆಯ ವ್ಯಯ ಪಟ್ಟಿ ಮಂಡಿಸಿ, ಸತೀಶ್ ಆಚಾರ್ಯ ಕುಂಬ್ರಿ, ಸತ್ಯನಾರಾಯಣ ಆಚಾರ್ಯ ದೊಡ್ಡೋಣಿ ಅವರು ಸಮ್ಮಾನಿತರ ಪಟ್ಟಿ ವಾಚಿಸಿ, ಕೆ.ಆರ್.ರಾಘವೇಂದ್ರ ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿ, ಗಣೇಶ್ ಆಚಾರ್ಯ ಕುಂಬ್ರಿ ನಿರೂಪಿಸಿ, ಜೀವಿ ವೆಂಕಟೇಶ್ ಆಚಾರ್ಯ ವಂದಿಸಿದರು.

    ಸಂಭ್ರಮದ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ
    ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವವು ವೇ| ಮೂ| ಪುರೋಹಿತ್ ರೋಹಿತಾಕ್ಷ ಆಚಾರ್ಯರ ಪ್ರ‘ನ ಆಚಾರ್ಯತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    sixteen − 11 =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.