Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕರ್ನಾಟಕ ಜಾನಪದ ಪರಿಷತ್ತು ದುಬೈ ಘಟಕದ ಅಧ್ಯಕ್ಷರಾಗಿ ಸದನ್‌ ದಾಸ್‌ ಆಯ್ಕೆ
    ಊರ್ಮನೆ ಸಮಾಚಾರ

    ಕರ್ನಾಟಕ ಜಾನಪದ ಪರಿಷತ್ತು ದುಬೈ ಘಟಕದ ಅಧ್ಯಕ್ಷರಾಗಿ ಸದನ್‌ ದಾಸ್‌ ಆಯ್ಕೆ

    Updated:05/10/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕರ್ನಾಟಕ ಜಾನಪದ ಪರಿಷತ್ತು ನೂತನವಾಗಿ ಆರಂಭಿಸಲಾಗುತ್ತಿರುವ ದುಬೈ ಘಟಕದ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಂಘಟಕ ಸದನ್‌ ದಾಸ್‌ ಶಿರೂರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಕಜಾಪ ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click Here

    Call us

    Click Here

    ಸದನ್‌ ದಾಸ್‌ ಅವರು ಕಳೆದ ಒಂದೂವರೆ ದಶಕದಿಂದ ದುಬೈನಲ್ಲಿ ನೆಲೆಸಿದ್ದು, ವಿಮಾ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ತಮ್ಮ ಉದ್ಯೋಗದ ಜೊತೆಗೆ ಹಲವು ಕನ್ನಡಪರ ಸಂಘಟನೆಗಳನ್ನು ಕಟ್ಟಿ ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕನ್ನಡಿಗರ ಕನ್ನಡ ಕೂಟ ದುಬೈ, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್‌, ಶಿರೂರು ಅಸೋಸಿಯೇಷನ್ ಮೊದಲಾದ ಸಂಘಟನೆಗಳ ಮೂಲಕ ಹತ್ತು ಹಲವು ಕನ್ನಡ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕರ್ನಾಟಕ ಇತಿಹಾಸ ಅಕಾಡೆಮಿ ಮೂಲಕ ಕರ್ನಾಟಕದ ಐತಿಹಾಸಿಕ ವೈಭವದ ಪರಿಚಯ, ಕರ್ನಾಟಕ ಪ್ರೆಸ್‌ ಕೌನ್ಸಿಲ್‌ ದುಬೈ ಘಟಕದ ನೇತೃತ್ವ, ಗಲ್ಫ್ ಕನ್ನಡ ಮೂವಿಸ್‌ ಮೂಲಕ ಕನ್ನಡ ಸಿನಿಮಾ ಪ್ರಚಾರ – ಹಂಚಿಕೆ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಭಗವದ್ಗೀತಾ ಪಠಣ ಅಭಿಯಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗಲ್ಫ್‌ ನಾಡಿನಲ್ಲಿಯೂ  ಅವಿರತವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

    ದುಬೈನಲ್ಲಿ ಸಮಾನ ಮನಸ್ಕ ತಂಡಗೊಂದಿಗೆ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸದನ್‌ ದಾಸ್‌ ಅವರು ಉದ್ಯೋಗ ಅರಸಿ ಯು.ಎ.ಇ ದೇಶಕ್ಕೆ ಬರುವ ಯುವಕರಿಗೆ, ರಾಜತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಸಹಕಾರ ಅರಸಿ ಬರುವವರಿಗೆ ನೆರವಿನ ಸೇತುವೆಯಾಗಿ ನಿಂತಿದ್ದಾರೆ. ಇದೀಗ ನಾಡಿನ ಗ್ರಾಮೀಣ ಹಾಗೂ ಜನಪದ ಸಂಸ್ಕೃತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ದುಬೈ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    one × one =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.