ಅಧ್ಯಯನದೊಂದಿಗೆ ಸಾಮಾಜಿಕ ಬದುಕಿನ ಸಮತೋಲನ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ  ಇವರ ಸಹಯೋಗದಲ್ಲಿ “ಅಧ್ಯಯನದೊಂದಿಗೆ ಸಾಮಾಜಿಕ ಬದುಕಿನ ಸಮತೋಲನ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Call us

Click Here

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಳಾವರ ವರದರಾಜ ಎಂ. ಶೆಟ್ಟಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಕೊಟೇಶ್ವರ ಇಲ್ಲಿನ  ಪ್ರಾಂಶುಪಾಲರಾದ ಡಾ. ರಾಜೇಂದ್ರ ನಾಯಕ್ ಮಾತನಾಡಿ, ವಿದ್ಯಾರ್ಥಿ ಜೀವನ ಎನ್ನುವುದು ನಮ್ಮ ಭವಿಷ್ಯದ ನಿರ್ಮಾಪಕ. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನಶೀಲತೆಯು  ಸಾಮಾಜಿಕವಾಗಿ ಸವಾಲುಗಳನ್ನು ಎದುರಿಸಲು ಅನುಕೂಲ ಮಾಡಿಕೊಡುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕೌಶಲಗಳ ಕಲಿಯುವಿಕೆಯು ನಾವು ಸಾಮಾಜಿಕವಾಗಿ  ಉತ್ತಮ  ಸ್ಥಾನ ಪಡೆಯಲು ಸಹಕಾರಿಯಾಗುತ್ತದೆ. ಈಗಾಗಲೇ ಯುನೆಸ್ಕೋ ಕೂಡ ಕೆಲವು ಅಂಶಗಳನ್ನು ಈ ನೆಲೆಯಲ್ಲಿ ಪಟ್ಟಿ ಮಾಡಿದೆ. ಹಾಗಾಗಿ ಅನೇಕ ಸವಾಲುಗಳನ್ನು ಎದುರಿಸುವುದಕ್ಕೆ ವಿದ್ಯಾರ್ಥಿ ತಯಾರಾಗಬೇಕು. ಹಾಗಿದ್ದಾಗ ಉನ್ನತ ಯಶಸ್ಸನ್ನು ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ  ಸತ್ಯನಾರಾಯಣ ವಹಿಸಿದ್ದರು.

ಈ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಮೀನಾಕ್ಷಿ ಎನ್.ಎಸ್. ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ  ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಂಗಲಾ ಪೈ ಸ್ವಾಗತಿಸಿದರು. ಸಾನಿಯಾ ಪರಿಚಯಿಸಿದರು.  ಪ್ರಗತಿ ವಂದಿಸಿದರು.

Click here

Click here

Click here

Click Here

Call us

Call us

Leave a Reply