ಸಟ್ವಾಡಿ ಸುಂದರ್‌ ಶೆಟ್ಟಿ ಬಸ್ ತಂಗುದಾಣ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಟ್ವಾಡಿಯಲ್ಲಿ ನಿರ್ಮಾಣ ಮಾಡಿದ ಸಟ್ವಾಡಿ ಸುಂದರ್‌ ಶೆಟ್ಟಿ ಬಸ್ ತಂಗುದಾಣವನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಉದ್ಘಾಟಿಸಿದರು.

Call us

Click Here

ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಜ್ಞೇಶ್ ಪ್ರಭು ವಹಿಸಿದ್ದರು.

ಲಯನ್ಸ್ ಕ್ಲಬ್ ಕುಂದಾಪುರದ ಸ್ಥಾಪಕ ಸದಸ್ಯರಾಗಿದ್ದು, ತನ್ನ ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದ ಸುಂದರ ಶೆಟ್ಟಿ ಅವರ ಸ್ಮರಣಾರ್ಥ ಅವರ ಕುಟುಂಬ ಸದಸ್ಯರು, ಸಾರ್ವಜನಿಕರ ಅನುಕೂಲಕ್ಕಾಗಿ ಸುಂದರ ಬಸ್ ತಂಗುದಾಣ ಕಟ್ಟಿಸಿಕೊಟ್ಟಿರುವುದುದ ಅಭಿನಂದನೀಯ. ಈ ಉತ್ತಮ ಯೋಜನೆ ಅನುಷ್ಠಾನಕ್ಕೆ ಕಾರಣರಾದ ಸಟ್ವಾಡಿ ಸುಂದರ ಶೆಟ್ಟಿ ಅವರ ಸಹೋದರ ವಿಜಯ ಶೆಟ್ಟಿ, ಪುತ್ರ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಕುಟುಂಬ ಸದಸ್ಯರಿಗೆ ಪ್ರೇರಣೆ ನೀಡಿದ ಲಯನ್ಸ್ ಕ್ಲಬ್ ಕುಂದಾಪುರದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಹೇಳಿದರು.

ಬಿ. ಅಪ್ಪಣ್ಣ ಹೆಗ್ಡೆ ಅವರು ಮಾತನಾಡಿ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಆಸಕ್ತರಾಗಿ ಕ್ರಿಯಾಶೀಲರಾಗಿದ್ದ ಸಟ್ವಾಡಿ ಸುಂದರ ಶೆಟ್ಟಿ ಅವರು ತಮ್ಮ ನಾಯಕತ್ವ ಗುಣದ ಮೂಲಕ ಜೀವನದಲ್ಲಿ ಉತ್ತಮ ಸಾಧನೆಗೈದಿದ್ದರು. ಅವರ ಕುಟುಂಬ ಸದಸ್ಯರೂ ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿದ್ದಾರೆ. ಈ ಪ್ರದೇಶದಲ್ಲಿ ಅಗತ್ಯವಾಗಿದ್ದ ಬಸ್ ತಂಗುದಾಣ ಸುಂದರ ಶೆಟ್ಟರ ಸ್ಮರಣೆಯಲ್ಲಿ ನಿರ್ಮಾಣ ಮಾಡಿರುವುದು ಅಭಿನಂದನೀಯ.

ಕಾರ್ಯಕ್ರಮ ಯೋಜಿಸಿದ ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷ, ಸದಸ್ಯರಿಗೂ ಅಭಿನಂದನೆಗಳು. ಎಂದು ಶುಭ ಹಾರೈಸಿದರು.

Click here

Click here

Click here

Click Here

Call us

Call us

ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಟಿ. ಪ್ರಕಾಶ ಸೋನ್ಸ್ ಪ್ರಾಸ್ತಾವಿಕ ಮಾತನಾಡಿ, ಸಟ್ವಾಡಿ ಸುಂದರ ಶೆಟ್ಟಿ ಅವರ ವ್ಯಕ್ತಿತ್ವದ ಪರಿಚಯ ನೀಡಿದರು. ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನುಪಮಾ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಡಾ| ಜಯರಾಮ ನಂಬಿಯಾರ್, ಡಾ| ರವೀಂದ್ರ ಉಪಸ್ಥಿತರಿದ್ದರು.

ಕಂದಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುಂದರ ಕಟ್ಟಡ ವಿನ್ಯಾಸ ಮಾಡಿದ ಹಾಗೂ ನಿರ್ಮಾಣ ಮಾಡಿದವರನ್ನು ಗುರುತಿಸಲಾಯಿತು.

ಸಟ್ವಾಡಿ ವಿಜಯ ಶೆಟ್ಟಿ ಮಾತನಾಡಿ, ಅಣ್ಣ ಸಟ್ವಾಡಿ ಸುಂದರ ಶೆಟ್ಟಿ ಸ್ಮರಣೆಗಾಗಿ ಅವರ ಲಯನ್ಸ್ ಕ್ಲಬ್‌ನ ಆಪ್ತ ಮಿತ್ರರು ಈ ಸಟ್ವಾಡಿಯಲ್ಲಿ ಬಹಳ ವರ್ಷ ಬಸ್ ತಂಗುದಾಣ ನಿರ್ಮಾಣ ಮಾಡಿದ್ದು, ಅದು ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಡವಲಾಗಿತ್ತು. ಇದೇ ಸ್ಥಳದಲ್ಲಿ ಲಯನ್ಸ್ ಕ್ಲಬ್ ಬಸ್ ನಿಲ್ದಾಣ ನಿರ್ಮಿಸಲು ಆಸಕ್ತಿ ಹೊಂದಿದ್ದರೂ ನಾವು ಕುಟುಂಬ ಸದಸ್ಯರು ಸ್ವಂತ ವೆಚ್ಚದಲ್ಲಿ ಬಸ್ ನಿಲ್ದಾಣ ಲಯನ್ಸ್ ಕ್ಲಬ್ ಪ್ರೇರಣೆಯೊಂದಿಗೆ ನಿರ್ಮಾಣ ಮಾಡಲು ನಿರ್ಧರಿಸಿದೆವು. ಸುಂದರವಾಗಿ ನಿರ್ಮಾಣಗೊಂಡ ಈ ತಂಗುದಾಣ ಗ್ರಾಮ ಪಂಚಾಯತ್‌ಗೆ ಒದಗಿಸುತ್ತಿದ್ದೇವೆ ಎಂದರು.

ಬಿ. ಎಸ್. ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು. ರಾಧಾಕೃಷ್ಣ ಶೆಟ್ಟಿ ಹಾಗೂ ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು.

ಲಯನ್ಸ್ ಕ್ಲಬ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Leave a Reply