ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮದ ಶ್ರೀ ಅತಿಶಯ ಕ್ಷೇತ್ರ ಬೋಳಂಬಳ್ಳಿ ಪದ್ಮಾವತಿ ದೇವಿ ದೇವಸ್ಥಾನದ ಬಳಿ ಭಗವಾನ್ ಶ್ರೀ ಬಾಹುಬಲಿಯ 28 ಅಡಿ (21 ಅಡಿ ಮೂರ್ತಿ, 7 ಅಡಿ ಪೀಠ) ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನ. 8ರಂದು ಕಂಬದಕೋಣೆಯಿಂದ ಬೋಳಂಬಳ್ಳಿಗೆ ವಿಗ್ರಹದ ಭವ್ಯ ಮೆರವಣಿಗೆ ನಡೆಯಿತು.
ಜೈನ ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್ ದಂಪತಿ ಆರತಿ ಬೆಳಗಿದರು. ಶ್ರೀ ಬಾಹುಬಲಿ ಬೆಟ್ಟದಲ್ಲಿ ಮೂರ್ತಿಯನ್ನು ಕ್ರೇನ್ ಮೂಲಕ ಇಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾಪನೆ ಸಮಿತಿಯ ಕಾರ್ಯದರ್ಶಿ ಸುಭಾಷ್ ಜೈನ್, ದೇವಸ್ಥಾನ ಅಭಿವೃದ್ಧಿ ಕಾರ್ಯದರ್ಶಿ ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಮೂಡುಬಿದಿರೆ 18 ಬಸದಿಗಳ ಮೊಕ್ತೇಸರರಾದ ಆದರ್ಶ್ ಎಂ. ಚೌಟರ ಅರಮನೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.