ಹಟ್ಟಿಅಂಗಡಿ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರರಿಗೆ ರಾಷ್ಟ್ರೀಯ ಮಟ್ಟದ ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಸ್ಟಾರ್ ಎಜ್ಯುಕೇಷನ್ ಅವಾರ್ಡ್‌ನವರು ಕೊಡಮಾಡುವ 2024ನೇ ಸಾಲಿನ ರಾಷ್ಟ್ರೀಯಮಟ್ಟದ ‘ಬೆಸ್ಟ್ ಪ್ರಿನ್ಸಿಪಾಲ್’ ಪ್ರಶಸ್ತಿಗೆ ಭಾಜನರಾದರು.

Call us

Click Here

2024ರ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ, ಅಸಾಧಾರಣ ನಾಯಕತ್ವ, ಕರ್ತವ್ಯದಲ್ಲಿ ಅಚಲ ನಿಷ್ಠೆ, ಸೃಜನಾತ್ಮಕತೆ, ಪ್ರಕೃತಿ ಸಂರಕ್ಷಣೆಗೆ ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳು ಇತ್ಯಾದಿ ಮಾನದಂಡಗಳ ಮೇಲೆ ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ನ.26 ರಂದು ಮುಂಬೈನ ಎಂ ಎಂ ಆರ್ ಡಿ ಎ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಮುಂಬೈನ ಎಫ್ ಎಫ್ ಟಿ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾದ ಅಲಾಖ್ ಸಿಂಗ್ ಪ್ರಶಸ್ತಿಯನ್ನು ವಿತರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶರಣಕುಮಾರ “ಈ ಗೌರವವು ನನ್ನ ವೈಯಕ್ತಿಕ ಸಾಧನೆಯಲ್ಲ, ಈ ಗೌರವವು ನಮ್ಮ ತಂಡದ ಶ್ರೇಷ್ಠ ಪ್ರಯತ್ನಗಳ ಸಾಧನೆಯ ಸಮರ್ಪಣೆಯ ಪ್ರತಿಫಲವಾಗಿದೆ. ಈ ಪ್ರಶಸ್ತಿಯು ದೇಶಾದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಭವಿಷ್ಯದ ಶ್ರೇಷ್ಠ ಸಾಧನೆಗಳಿಗೆ ಪ್ರೇರಣೆ ನೀಡುತ್ತಿದೆ.” ಎಂದು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ. ಮಾತನಾಡಿ, “ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆಗಿರುವ ಶರಣ ಕುಮಾರ ಶಾಲೆಯ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿದ್ದು, ಅವರ ನಾಯಕತ್ವದಲ್ಲಿ ಶಾಲೆ ಮಾದರಿ ಶಾಲೆಯಾಗಿ ಹೊರಹೊಮ್ಮುತ್ತಿದೆ. ಬೆಸ್ಟ್ ಪ್ರಿನ್ಸಿಪಾಲ್ ಪ್ರಶಸ್ತಿಯು ಅವರ ಅರ್ಹತೆಗೆ ಸಂದ ಗೌರವಾಗಿದೆ” ಎಂದರು.

Click here

Click here

Click here

Click Here

Call us

Call us

ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಶಿಕ್ಷಕೇತರ ವೃಂದ, ಹಾಗೂ ವಿದ್ಯಾರ್ಥಿಗಳು ಶಾಲೆಯ ಪ್ರಾಂಶುಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply