ಸರಸ್ವತಿ ವಿದ್ಯಾಲಯದಲ್ಲಿ ಎಸ್. ವಿ. ಪಿ. ಎಲ್ ಕ್ರಿಕೆಟ್ ಪಂದ್ಯಾಟ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳುವ ಪಂದ್ಯಾಟಗಳು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಗಳನ್ನು ಮಾಡುವಲ್ಲಿ ಬಹಳ ದೊಡ್ಡ ಪ್ರೇರಣೆಯನ್ನು ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗೊಳ್ಳಿಯ ಖ್ಯಾತ ಉದ್ಯಮಿ ವಿಠಲ ಶೆಣೈ  ಅವರು ಅಭಿಪ್ರಾಯಪಟ್ಟರು.

Call us

Click Here

 ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಎಸ್. ವಿ. ಪಿ. ಎಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿ. ಎಸ್‌. ವಿ. ಎಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾಕ್ಟರ್ ಕಾಶಿನಾಥ್ ಪೈ, ಸರಸ್ವತಿ ವಿದ್ಯಾಲಯ  ಸಂಸ್ಥೆಗಳ ಸಂಚಾಲಕರಾದ ಸದಾಶಿವ ನಾಯಕ್ ಎನ್,, ಜಿ.ಎಸ್. ವಿ.ಎಸ್ ಅಸೋಸಿಯೇಷನ್ ಖಜಾಂಜಿ   ಅಶ್ವಿನ್ ನಾಯಕ್, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್, ಉಪನ್ಯಾಸಕಿ ಸುಗುಣ ಆರ್. ಕೆ.  ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. 

 ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯ ಹಮ್ಮಿಕೊಂಡ ವಿವಿಧ ಕ್ರೀಡಾಕೂಟಗಳ ಯಶಸ್ವಿಗೆ ಶ್ರಮಿಸಿದ ವಿವಿಧ ಕ್ರೀಡಾಳುಗಳನ್ನು ಅಭಿನಂದಿಸಿ ಗೌರವಿಸಲಾಯಿತು. 

ದೈಹಿಕ ಶಿಕ್ಷಣ ಉಪನ್ಯಾಸಕರಾದ ದೀಕ್ಷಿತ್ ಮೇಸ್ತ ಪ್ರಾಸ್ತಾವಿಕ ನುಡಿಗಳನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸೂರಜ್ ಸಾರಂಗ ಅತಿಥಿಗಳನ್ನು ಸ್ವಾಗತಿಸಿದರು. ಸುಶ್ಮಿತಾ ಗಾಣಿಗ ನಿರೂಪಿಸಿದರು. ಶ್ರೇಯಲ್ ವಂದಿಸಿದರು.

Click here

Click here

Click here

Click Here

Call us

Call us

Leave a Reply