ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳ ಕುರಿತು ಕಾರ್ಯಾಗಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಶಿಕ್ಷಣ ಕ್ಷೇತ್ರದಲ್ಲಿ ಸದಾ ನವೀನತೆ ಅಳವಡಿಸಿ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಮನೋಸ್ಥೈರ್ಯವನ್ನು ಬಲಪಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್  3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳು ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

Call us

Click Here

ಸಂಸ್ಥೆಯ ಆಡಳಿತಾಧಿಕಾರಿ ಶಮಿತಾ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊಫೆಸರ್ ಆಶಾದೇವಿ ಎಮ್ (ಶಿಕ್ಷಣತಜ್ಞೆ, ಮನಶಾಸ್ತ್ರಜ್ಞರು, ನರ್ಸರಿ ಮತ್ತು ಮೊಂಟೆಸ್ಸರಿ ತರಬೇತುದಾರರು ಹಾಗೂ ಸಲಹೆಗಾರರು, ಬೆಂಗಳೂರು) ಇವರು ಹಲವಾರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೇಗೆ ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ನೈತಿಕ ಪ್ರಜ್ಞೆ ಸಹಾಯಕ, ವರ್ತನೆ, ಭಾವನಾತ್ಮಕ ಬುದ್ಧಿವಂತಿಕೆ, ಸ್ವಯಂ ನಿಯಂತ್ರಣ, ಧನಾತ್ಮಕ ಮನೋವೈಜ್ಞಾನಿಕ ಮಾರ್ಗದರ್ಶನ, ಸಾಮಾಜಿಕ ಬುದ್ಧಿವಂತಿಕೆ, ನಾಯಕತ್ವದ ಕೌಶಲ್ಯ, ಹೊಸ ಹೊಸ ಆಲೋಚನೆ, ಆತ್ಮವಿಶ್ವಾಸ, ಸಾಮಾಜಿಕ ರೂಢಿಗಳು, ವಿಷಯಜ್ಞಾನ, ಚರ್ಚೆ, ಕೀಳರಿಮೆ, ಕಲಿಕೆಯ ಆಸಕ್ತಿ, ಅಭ್ಯಾಸದಲ್ಲಿ ಅಭಿಪ್ರೇರಣೆ, ಕಲಿಕಾ ಹವ್ಯಾಸಗಳು, ಸಮಯನಿರ್ವಹಣೆ, ಗುಡ್ ಟಚ್ ಮತ್ತು ಬ್ಯಾಡ ಟಚ್ ಮುಂತಾದ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಸಿ ವಿದ್ಯಾರ್ಥಿಗಳ ವಯೋಮಾನಕ್ಕನುಗುಣವಾಗಿ ಮಾರ್ಗದರ್ಶನ ನೀಡಿದರು.

ಭಯಮುಕ್ತರಾಗಿ ಮಕ್ಕಳು ತಮ್ಮಲ್ಲಿ ಹುದುಗಿರುವ ವಿಭಿನ್ನ ಪ್ರತಿಭೆಯನ್ನು ಹೇಗೆ ಇತರರಿಗೆ ಗುರುತಿಸುವಲ್ಲಿ ಜೀವನ ಕೌಶಲ್ಯ ಸಹಾಯಕ ಎಂಬಿತ್ಯಾದಿ ವಿಷಯದ ಕುರಿತು ತಿಳಿಸಿದರು.

ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸತೀಶ್ ಶೆಟ್ಟಿ ಬೋಧಕ ಮತ್ತು ಬೋಧಕೇತರ ವೃಂದ ಹಾಜರಿದ್ದರು. ಶಿಕ್ಷಕಿ ಅವಿನಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಶಾಂತಿ ವಂದಿಸಿದರು.

Click here

Click here

Click here

Click Here

Call us

Call us

Leave a Reply