ಸಾಲಿಗ್ರಾಮ: ಕಿಶೋರ ಯಕ್ಷಗಾನ ಸಂಭ್ರಮ 2024ರ ಪ್ರದರ್ಶನಗಳ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ವಿಧಾನಸಭಾ ವ್ಯಾಪ್ತಿಯ 22 ಪ್ರೌಢಶಾಲೆಗಳಲ್ಲಿ ನಡೆಯುವ ಉಡುಪಿ ಯಕ್ಷ ಶಿಷ್ಯ ಟ್ರಸ್ಟ್ ಆಯೋಜಿಸುತ್ತಿರುವ ಕಿಶೋರ್ ಯಕ್ಷಗಾನ ಸಂಭ್ರಮ 2024ರ ಪ್ರದರ್ಶನಗಳ ಉದ್ಘಾಟನೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವೇದಿಕೆಯಲ್ಲಿ ನಡೆಯಿತು.

Call us

Click Here

ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು  ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿ, ಈ ಭಾಗದ ಪ್ರತಿಯೊಬ್ಬರ ಮಾತಿನಲ್ಲಿ, ಬರವಣಿಗೆಯಲ್ಲಿ ಯಕ್ಷಗಾನದ ದಟ್ಟ ಪ್ರಭಾವ ಗೋಚರವಾಗುತ್ತದೆ. ಇಂತಹ ನಮ್ಮ ಮಣ್ಣಿನ ಅಪೂರ್ವ ಕಲೆಯನ್ನು ಮಕ್ಕಳಿಗೆ ಪರಿಚಯಿಸುವ ಯಕ್ಷ ಶಿಕ್ಷಣ ಅಭಿಯಾನ ಯಶಸ್ವಿಯಾಗಲೆಂದು ನುಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆನಂದ ಸಿ.ಕುಂದರ್, ರಾಜಶೇಖರ್ ಹೆಬ್ಬಾರ್, ವಾಸುದೇವ ಕಾರಂತ, ಜಗದೀಶ ನಾವುಡ, ಶ್ರೀನಿವಾಸ ಉಪಾಧ್ಯಾಯ ಅಭ್ಯಾತರಾಗಿ ಪಾಲ್ಗೊಂಡು ಶುಭ ಕೋರಿದರು.

ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಎಚ್.ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ್, ಗಣಪತಿ ಭಟ್, ನಾಗರಾಜ ಹೆಗಡೆ ಭಾಗವಿಸಿದರು.

ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಡಾ. ರಾಜೇಶ್ ನಾವುಡ ಧನ್ಯವಾದ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

Click here

Click here

Click here

Click Here

Call us

Call us

ಸಭೆಯ ಪೂರ್ವದಲ್ಲಿ ಚೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರತೀಶ್ ಕುಮಾರ್ ನಿರ್ದೇಶನದಲ್ಲಿ ವನವಿಲಾಸ, ಸಭಾ ಕಾರ್ಯಕ್ರಮದ ಬಳಿಕ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.

Leave a Reply