ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಸ್ಕೃತಿಕ ಚಟುವಟಿಕೆಗಳು ಕೇವಲ ಆಸಕ್ತಿಗೆ ಮಾತ್ರ ವೇದಿಕೆಯಲ್ಲ. ಬದಲಾಗಿ ಊರಿನ ಅಭಿವೃದ್ದಿಯ ಚಿಂತನೆಗಳು ಕೂಡ ಪುಟಿದೇಳುತ್ತದೆ. ಗ್ರಾಮೀಣ ಭಾಗದಲ್ಲಿ ಸಂಚಲನ ಸಂಸ್ಥೆ ರಂಗಾಸಕ್ತಿಯ ಮೂಲಕ ರಾಜ್ಯಮಟ್ಟದಲ್ಲಿಗುರುತಿಸಿಕೊಂಡಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಸಂಚಲನ ರಿ. ಹೊಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ವತಿಯಿಂದ ಹೊಸೂರಿನಲ್ಲಿನಡೆದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಮಹಾದೇವ ಮರಾಠಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕಿ ಪೂರ್ಣಿಮಾ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೆಶಿತ ಸದಸ್ಯರಾದ ನಾಗರಾಜ ಶೆಟ್ಟಿ, ನಾಗರಾಜ ಗಾಣಿಗ, ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೆಶಕ ಶಂಕರ ಶೆಟ್ಟಿ, ಉದ್ಯಮಿ ಮ್ಯಾಥ್ಯ ಕೆ.ಎಸ್. ನಂದರಗದ್ದೆ, ಬೈ.ವ್ಯ. ಸೇವ ಸ. ಸಂಘ ತೂದಳ್ಳಿ ಶಾಖೆಯ ಶಾಖಾಧಿಕಾರಿ ಲಕ್ಷ್ಮೀ ನಾಗೇಶ್, ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕ ರಾಮ, ಮುಲ್ಲಿಬಾರು ಶಾಲೆಯ ಎಸ್ .ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಮಂಜ ಮರಾಠಿ ಗಂಗನಾಡು ಅವರನ್ನು ಸಮ್ಮಾನಿಸಲಾಯಿತು.
ಖಜಾಂಚಿ ನಾಗಪ್ಪ ಮರಾಠಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಸಂಚಲನ ಸಂಸ್ಥೆಯ ಕಾರ್ಯದರ್ಶಿ ರಾಜು ಮರಾಠಿ ವಂದಿಸಿದರು.
















