ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.25: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ನೇತೃತ್ವದ ಕಾಂಗ್ರೆಸ್ ಬೆಂಬಲಿಯ ಗುಂಪು 13 ಸ್ಥಾನಗಳನ್ನು ಪಡೆದುಕೊಂಡಿದೆ. ಇಂದು 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 1 ಸ್ಥಾನ ಅವಿರೋಧ ಆಯ್ಕೆಯಾಗಿದೆ.
ಸಾಮಾನ್ಯ ಕ್ಷೇತ್ರದಿಂದ ಮಹೇಶ ಹೆಗ್ಡೆ ಮೊಳಹಳ್ಳಿ, ಎಚ್. ಹರಿಪ್ರಸಾದ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಲವಕರ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ಶ್ರೀಮತಿ ಇಂದಿರಾ ಯು ಶೆಟ್ಟಿ ಆಯ್ಕೆಯಾದರು. ಮಹಿಳಾ ಮೀಸಲು ಸ್ಥಾನದಿಂದ ವಾಣಿ ಆರ್ ಶೆಟ್ಟಿ, ಚೈತ್ರ ಅಡಪ ಆಯ್ಕೆಯಾದರು. ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರದಿಂದ ದಿನೇಶ ಮೊಗವೀರ ಆಯ್ಕೆಯಾದರೆ, ಹಿಂದುಳಿದ ವರ್ಗ ‘ಬಿ’ ಮೀಸಲು ಷೇತ್ರದುಂದ ಉಮೇಶ ಶೆಟ್ಟಿ ಆಯ್ಕೆಯಾದರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗಣೇಶ ಆಯ್ಕೆಯಾದರು. ಈ ಹಿಂದೆಯೇ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಗಿರೀಶ್ ಅವಿರೋಧ ಆಯ್ಕೆಯಾಗಿದ್ದರು.
ಚುನಾವಣೆ ಶಾಂತಿಯುತವಾಗಿ ನೆಡೆದಿದ್ದು ಚುನಾವಣಾ ಅಧಿಕಾರಿ ಸುನೀಲ್ ಕುಮಾರ್ ಸಿ,ಎಂ. (ಸಹಕಾರ ಅಭಿವೃದ್ಧಿ ಅಧಿಕಾರಿ) ಚುನಾವಣೆಯನ್ನು ನಡೆಸಿಕೊಟ್ಟರು. ಚುನಾವಣೆಯಲ್ಲಿ ಸಹಕರಿಸಿದ ಹಾಲಿ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಕೃತಜ್ಞತೆ ಅರ್ಪಿಸಿದ್ದಾರೆ