ಗಂಗೊಳ್ಳಿ: ಬಿಲ್ಲವರ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಟಿ. ವಿಮಲಾ ವಿ. ಪೈ ಸಭಾಂಗಣದಲ್ಲಿ ಬಿಲ್ಲವರ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ನೆಡೆಯಿತು.

Call us

Click Here

ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘಟನೆಯಿಂದ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯ. ಎಲ್ಲರೂ ಸಂಘಟಿತರಾಗಿ ಪ್ರಯತ್ನ ನಡೆಸಿದರೆ ಯಶಸ್ಸು ದೊರೆಯುತ್ತದೆ. ಗಂಗೊಳ್ಳಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಅಗತ್ಯವಿರುವ ನಿವೇಶನ ದೊರಕಿಸಿ ಕೊಡುವಲ್ಲಿ ಮತ್ತು ಸಂಘದ ಕಚೇರಿ ಪ್ರಾರಂಭಿಸಲು ಅಗತ್ಯ ನೆರವು ಒದಗಿಸುವುದಾಗಿ ಅವರು ಭರವಸೆ ನಿಡಿದರು.

ಸಂಘದ ಅಧ್ಯಕ್ಷ ಗೋಪಾಲ್ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಬಿಲ್ಲವರ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಗೋಪಾಲ ಪೂಜಾರಿ ಶುಭ ಹಾರೈಸಿದರು. ಸಂಘದ ಪದಾಧಿಕಾರಿಗಳು ಈ ಸಂಧರ್ಭದಲ್ಲಿ ಗಂಗೊಳ್ಳಿ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಲ್ಲವ ಸಮಾಜ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಕ್ಷ್ಮಣ ಬಿಲ್ಲವ ಸ್ವಾಗತಿಸಿದರು. ಕೃಷ್ಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಪೂಜಾರಿ ವಂದಿಸಿದರು.

Leave a Reply