ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ನಿರ್ದೇಶಕರ ಮಂಡಳಿಗೆ ಅವಿರೋಧ ಆಯ್ಕೆ ನಡೆದಿದೆ. ಕಾಂಗ್ರೆಸ್ ಬೆಂಬಲಿತ ಗುಂಪಿಗೆ ಒಂಬತ್ತು ಸ್ಥಾನ ಹಾಗೂ ಬಿಜೆಪಿ ಬೆಂಬಲಿತ ಗುಂಪಿಗೆ ನಾಲ್ಕು ಸ್ಥಾನ ದೊರಕಿದೆ.
ಸಾಮಾನ್ಯ ಕ್ಷೇತ್ರದಲ್ಲಿ, ನವೀನ ಕುಮಾರ್ ಹೆಗ್ಡೆ ಶಾನಾಡಿ ಕೆದೂರು, ಸದಾನಂದ ಶೆಟ್ಟಿ ಕೆದೂರು, ಮೋಹನದಾಸ ಶೆಟ್ಟಿ ಎಂ, ಭರತ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಹೆಗ್ಡೆ, ರಮೇಶ್ ಸುವರ್ಣ ಕೋಟೇಶ್ವರ, ಗೋಪಾಲ ಕುಂಭಾಶಿ ಆಯ್ಕೆಗೊಂಡರು. ಮಹಿಳಾ ಮೀಸಲಾತಿಯಲ್ಲಿ ಆಶಾಲತಾ ಶೆಟ್ಟಿ ವಕ್ವಾಡಿ, ಸುಶೀಲ ಕೋಟೇಶ್ವರ ಆಯ್ಕೆಗೊಂಡರು. ಹಿಂದುಳಿದ ವರ್ಗ ಮೀಸಲು ಸ್ಥಾನ(ಪ್ರವರ್ಗಎ)ದಲ್ಲಿ ಅಶೋಕ್ ಪೂಜಾರಿ ಬೀಜಾಡಿ, ಹಿಂದುಳಿದ ವರ್ಗ ಮೀಸಲು ಸ್ಥಾನ (ಪ್ರವರ್ಗ ಬಿ)ದಲ್ಲಿ ಗೋಪಾಲ ಶೆಟ್ಟಿ ಹೊಸ್ಮಠ ಕೊರ್ಗಿ ಆಯ್ಕೆಯಾದರು. ಪ.ಜಾತಿ ಮೀಸಲು ಸ್ಥಾನದಲ್ಲಿ ಸುರೇಶ ಕೆ. ವಿ ಕಾಳಾವರ ಹಾಗ ಪ. ಪಂಗಡ ಮೀಸಲು ಸ್ಥಾನದಲ್ಲಿ ಚಿಕ್ಕು ಅಸೋಡು ಆಯ್ಕೆಗೊಂಡರು.
ಮುಂದಿನ ಐದು ವರ್ಷಗಳ ಅವಧಿಗೆ ಜನವರಿ 5ರಂದು ನಡೆಯಬೇಕಿದ್ದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿರುವ ಉಮೇದುದಾರರ ನಾಮಪತ್ರಗಳನ್ನು ಪರಿಶೀಲಿಸಿ ಸಂಘದ ಉಪವಿಧಿಯ ಪ್ರಕಾರ ಆಯ್ಕೆಯಾಗಬೇಕಾದ ಸ್ಥಾನಗಳ ಸಂಖ್ಯೆಗೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯು ಸರಿಸಮನಾಗಿರುವುದರಿಂದ ಅರ್ಹ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಹಕಾರ ಅಭಿವೃದ್ಧಿ ಅಧಿಕಾರಿಯಾದ ಸುನೀಲ್ ಕುಮಾರ್ ಸಿ. ಎಮ್ ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಸಹಕರಿಸಿದರು.