ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡರ ಕಂಟೋನ್ಮೆಂಟ್ ಕಥೆಗಳು ಕೃತಿ ಲೋಕಾರ್ಪಣೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಭಾರತೀಯ ಸೇನೆ ಯುವಕರಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸುವ ಭರಪೂರ ಪ್ರಯತ್ನ ಮಾಡುತ್ತದೆ. ಅಂತಹ ಅತ್ಯುತ್ತಮ ತರಬೇತಿ ವ್ಯವಸ್ಥೆ ನಮ್ಮ ಸೇನೆಯಲ್ಲಿದೆ. ಅಂತೆಯೇ ಸೈನ್ಯ ಅಧಿಕಾರಿ ಎಷ್ಟೇ ಕರ್ತವ್ಯ ನಿಷ್ಟುರನಾದರೂ, ಗಡಸು ಸ್ವಭಾವದವನಾದರೂ ಆತನೊಳಗೊಂದು ಮಾನವೀಯ ಮುಖ ಇದ್ದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

Call us

Click Here

ಅವರು ನಾಗೂರಿನಲ್ಲಿ ಭಾನುವಾರ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಅವರ ಕಂಟೋನ್ಮೆಂಟ್ ಕಥೆಗಳು ಎಂಬ ಕಥಾಸಂಕಲನದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸೈನಿಕರೂ ಸಹ ನಾಗರಿಕ ಸಮಾಜದಲ್ಲೇ ಹುಟ್ಟಿ ಬೆಳೆದವರು. ಅವರೂ ನಮ್ಮ ಸಮಾಜದ ಭಾಗವೇ ಆಗಿರುವುದರಿಂದ ಅಲ್ಲಿಯೂ ಸಹ ನಾಗರಿಕ ಸಮಾಜದಲ್ಲಿ ಕಾಣಬಹುದಾದ ಕೆಲವು ನ್ಯೂನತೆಗಳಿವೆ, ವ್ಯಕ್ತಿಗಳ ನಡುವಿನ ಸಂಘರ್ಷಗಳೂ ಇವೆ ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ ಸೈನ್ಯಶಿಸ್ತು, ಕಠಿಣ ನಿಯಮಗಳು ಇವುಗಳನ್ನೆಲ್ಲಾ ಹದ್ದುಬಸ್ತಿನಲ್ಲಿರಿಸಲು ಸಮರ್ಥವಾಗಿದೆ. ಸೇನೆಯ ನ್ಯಾಯ ತಂತ್ರವೂ ಮಜಬೂತಾಗಿದೆ. ಅವನೊಳಗೊಂದು ದೇಶಭಕ್ತಿಯ ಭಾವ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸುರಭಿ ಬೈಂದೂರು ಅಧ್ಯಕ್ಷರಾದ ಆನಂದ ಮದ್ದೋಡಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು, ತಮ್ಮ ಜೀವದ ಹಂಗು ತೊರೆದು ನಮ್ಮನ್ನು ಹಾಗೂ ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ ಎಂದರು.

ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೇಡಿಯೋ ಕುಂದಾಪ್ರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕೃತಿ ಪರಿಚಯಿಸಿದರು. ಲೇಖಕ ಬೈಂದೂರು ಚಂದ್ರಶೇಖರ ನಾವಡ ಪ್ರಾಸ್ತಾವಿಸಿ ವಂದಿಸಿದರು.

Click here

Click here

Click here

Click Here

Call us

Call us

Leave a Reply