ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಗದೀಶ್ ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಉಪ್ಪಳ್ಳಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಗದೀಶ್ ಪೂಜಾರಿ ಹಕ್ಕಾಡಿ ಅವರು ಮಾತನಾಡಿ, 13 ಜನರ ನಮ್ಮ ತಂಡದ ಮೇಲೆ ನಂಬಿಕೆ ಇರಿಸಿ ಸಂಘದ ಸದಸ್ಯರು ಆಯ್ಕೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ ಭರವಸೆಯಂತೆ ಕೃಷಿ ಸಾಲವನ್ನು ತಕ್ಷಣ ನೀಡುವ ವ್ಯವಸ್ಥೆ, ನಾವುಂದ ಅರೆಹೊಳೆ ಗಣೇಶನಗರದ ಮಧ್ಯೆಭಾಗದಲ್ಲಿ ರೇಷನ್ ವಿತರಿಸುವ ಕೇಂದ್ರೆ ಸ್ಥಾಪಿಸುವ ವ್ಯವಸ್ಥೆ ಸೇರಿದಂತೆ ಇನ್ನಿತರ ಭರವಸೆಯನ್ನು ಮುಂದಿನ 5 ವರ್ಷದಲ್ಲಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ನರಸಿಂಹ ದೇವಾಡಿಗ, ಶ್ರೀನಿವಾಸ ಪೂಜಾರಿ, ಗಣೇಶ್ ಪೂಜಾರಿ, ಪ್ರಭಾಕರ ಎಂ.ಖಾರ್ವಿ, ಹರಿಶ್ಚಂದ್ರ ಆಚಾರ್ಯ, ಲಕ್ಷ್ಮೀ, ಶಕುಂತಲಾ, ಗಣೇಶ್ ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ್ ನಾಯ್ಕ ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿ ಸುನೀಲ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು, ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ಸಹಕರಿಸಿದರು.










