ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಸ್ವವಿವರ (ರೆಸ್ಯೂಮ್) ತಯಾರಿ ಮಾಡುವುದು ಅತಿ ಮುಖ್ಯ. ತಮ್ಮ ಸ್ವವಿವರ ನೀಡುವಲ್ಲಿ ತಮ್ಮ ವಿದ್ಯಾರ್ಹತೆಯ ಜೊತೆಗೆ ತಮ್ಮಲ್ಲಿರುವ ಕೌಶಲಗಳ ಬಗ್ಗೆ ಹೇಗೆ ಅದರಲ್ಲಿ ಪಡಿಮೂಡಿಸಬೇಕು ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ಲೇಸ್‌ಮೆಂಟ್ ವಿಭಾಗದ ಸಂಯೋಜಕ ಮಹೇಶ್ ಕುಮಾರ್ ಹೇಳಿದರು.
ಅವರು ಕಾಲೇಜಿನ ಇಂಗ್ಲಿಷ್ ವಿಭಾಗವು ಆಯೋಜಿಸಿದ “ರೆಸ್ಯೂಮ್ ಬಿಲ್ಡಿಂಗ್ ಆಂಡ್ ಪರ್ಸ್ನಲ್ ಬ್ರ‍್ಯಾಂಡಿಂಗ್” ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ದೀಪಿಕಾ ಜಿ., ಕಾರ್ಯಕ್ರಮದ ಸಂಯೋಜಕರಾದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸನ್ಮಿತಾ ಸ್ವಾಗತಿಸಿ, ಸ್ವಸ್ತಿಕ್ ವಂದಿಸಿ, ಶ್ರೀರಕ್ಷಾ ನಿರೂಪಿಸಿದರು.










