ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾನವ ಹಕ್ಕು ಸಂಘವು ಜಂಟಿಯಾಗಿ ಜೆ.ಸಿ.ಐ ಕುಂದಾಪುರದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಮಹಿಳೆ – ಕಾನೂನು ಮತ್ತು ಮಾನಸಿಕ ಒತ್ತಡ” ಎಂಬ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದ ಉಧ್ಘಾಟಕರಾಗಿ ಆಗಮಿಸಿದ ಜೆ.ಸಿ.ಐ ಸೌಜನ್ಯ ಹೆಗ್ಡೆ, ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರು, ಜೆ.ಸಿ.ಐ ಇಂಡಿಯಾ ಇವರು “ಮಹಿಳೆ ಆಕೆಯ ಅರ್ಹತೆಗೆ ತಕ್ಕ ಕೆಲಸವನ್ನು ಮಾಡಲು ಅರ್ಹಳು. ಮಹಿಳೆ ತನ್ನ ಕನಸನ್ನು ನನಸಾಗಿಸಲು ಸದಾ ಪ್ರಯತ್ನಿಸುತ್ತಾಳೆ” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರ ವಕೀಲರು ಮತ್ತು ವಕೀಲರ ಸಂಘದ ಅಧ್ಯಕ್ಷರಾದ ಪ್ರಮೋದ್ ಹಂದೆ ಅವರು ಮಾತನಾಡಿ “ಮನುಷ್ಯನು ತನ್ನಲ್ಲಿ ಋಣಾತ್ಮಕ ವಿಚಾರವನ್ನು ಬೆಳೆಸಿಕೊಳ್ಳದೇ, ಧನಾತ್ಮಕ ವಿಚಾರವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ತಾಳ್ಮೆಯಿಂದ ಯೋಚಿಸಿ ನಿರ್ಧಾರವನ್ನು ಕೈಗೊಳ್ಳಬೇಕೇ ಹೊರತು ದುಡುಕಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಾರದು. ಹಾಗೆಯೇ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವನ್ನು ಮೂಡಿಸಿದರು”.
ಕುಂದಾಪುರದ ಜೆ.ಸಿ.ಐ ಸ್ಥಾಪಕ ಅಧ್ಯಕ್ಷರಾದ ಜೆ.ಸಿ ಹುಸೇನ್ ಹೈಕಾಡಿ ಅವರು ಬದುಕಿನ ಮಹತ್ತರ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿ, ಜೇವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೆ.ಸಿ.ಐ ಕುಂದಾಪುರ ಅಧ್ಯಕ್ಷರಾದ ಜೆ.ಸಿ ಯೂಸುಫ್ ಹಲೀಮ್ ಅವರು ಜೆ.ಸಿ.ಐ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ತಿಳಿಸಿದರು.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆಯವರಾದ ಶಬೀನಾ ಹೆಚ್ ಅವರು “ವಿದ್ಯೆಯನ್ನು ಕಲಿತು ಯಶಸ್ಸನ್ನು ಪಡೆಯುವುದು ಸರ್ವೇಸಾಮಾನ್ಯ, ಮಹಿಳೆ ಅತೀ ಕಷ್ಟದಲ್ಲಿ ಸಾಧನೆಯ ಮಾಡಿದವರಿಗೆ ಗೌರವ ಸಲ್ಲಿಸುವುದು ನಿಜಕ್ಕೂ ಶ್ಲಾಘನೀಯ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ. ಕೆ.ಎಂ. ಅಬ್ದುಲ್ ರೆಹಮಾನ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಂದಾಪುರದ ಮಹಿಳಾ ಜೆ.ಸಿ ಅಧ್ಯಕ್ಷರಾದ ಜೆ.ಸಿ ಶೈಲಾ ಲೂವಿಸ್ , ಕುಂದಾಪುರದ ಮಹಿಳಾ ಜೆ.ಸಿ.ಐ ಮಹಿಳಾ ಸಹ-ಸಂಯೋಜಕರಾದ ಜೆ.ಸಿ ಪ್ರೇಮ, ಕುಂದಾಪುರದ ಜೆ.ಸಿ.ಐನ ಕಾರ್ಯದರ್ಶಿಯವರಾದ ಜೆ.ಸಿ ಕಿರಣ್ ದೇವಾಡಿಗ ಹಾಗೂ ರಾಷ್ಟೀಯ ಸೇವಾಯೋಜನೆಯ ಸಂಯೋಜಕಿಯವರಾದ ನೂತನ್. ಎಸ್. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಸುಮನ ಅವರು ನಿರೂಪಿಸಿದರು.