ಯಡ್ತರೆ ಗ್ರಾಮದ ಪದವಿ ವಿದ್ಯಾರ್ಥಿ ನಾಪತ್ತೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಯಡ್ತರೆ ಗ್ರಾಮದ ನಿವಾಸಿ ನಿಟ್ಟೆ ಕಾಲೇಜಿನ ಪದವಿ ವಿದ್ಯಾರ್ಥಿ ಅಭಿನಂದನ್ (20) ನಾಪತ್ತೆಯಾಗಿದ್ದಾನೆ. ಫೆ.21ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆ ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಬಳಿಕ ಪೋನ್ ಮಾಡಿರಲಿಲ್ಲ.

Call us

Click Here

ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿಯಲ್ಲಿ ವ್ಕಾಸಂಗ ಮಾಡುತ್ತಿದ್ದ ಅಭಿನಂದನ್ ಕಾಲೇಜಿನ ಹಾಸ್ಟೇಲ್‌ನಲ್ಲಿ ಉಳಿದುಕೊಂಡಿದ್ದನು. ರಜೆಯಲ್ಲಿ ಬೈಂದೂರು ಮನೆಗೆ ಬಂದು ಹೋಗುತ್ತಿದ್ದನು.

ಕಾಲೇಜಿಗೆ ಹೋದವನು ಪೋನ್ ಮಾಡದ್ದರಿಂದ ಅನುಮಾನಗೊಂಡು ತಂದೆ ಮಹಾಬಲೇಶ್ವರ ಅವರು ಮಾ.26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರಿಸಿದಾಗ ಆತ ರಜೆಯಲ್ಲಿ ಹೋದವ ಕಾಲೇಜಿಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಪೋನ್ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಕಾಣೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply