ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇತಿಹಾಸದಲ್ಲೆ ಮೊದಲೆಂಬಂತೆ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ನಲ್ಲಿ ಸಾಕ್ಷಿಯಾಯಿತು.
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಿಂದ ಶ್ರೀನಿವಾಸ ಪದ್ಮಾವತಿ ಒಳಗೊಂಡ ಮೂರ್ತಿ ವರ್ಣರಂಜಿತ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿಕೊಂಡು ಶ್ರೀನಿವಾಸ ಕಲ್ಯಾಣ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು.
ಗಮನ ಸೆಳೆಚ ವರ್ಣರಂಜಿತ ಮೆರೆವಣಿಗೆ
ಸಾಲಿಗ್ರಾಮದಿಂದ ಹೊರಟ ಪುರಮೆರವಣಿಗೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ಕುಣಿತ ಭಜನಾ ತಂಡಗಳು, ಕೀಲು ಕುದುರೆ, ಕೋಲಾಟ ಭಜನೆ, ಚಂಡೆ ವಾದನ, ಪಂಡಾರಪುರ ಹೊಲುವ ಭಜನಾ ತಂಡ, ಸಾವಿರಾರು ಶ್ರೀನಿವಾಸ ಭಕ್ತರು ಪೂರ್ಣಕುಂಭ ಕಳಶ ಹಿಡಿದು ಮೆರವಣಿಗೆಯೂದ್ದಕ್ಕೂ ಗೋವಿಂದನ ನಾಮ ಸ್ಮರಣೆಗೈಯುವ ದೃಶ್ಯ ವಿಶೇಷವಾಗಿ ಪದ್ಮಾವತಿ ಸಹಿತ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ಗಮನ ಸೆಳೆಯಿತು.
ಬೆಳಿಗ್ಗೆ 9.00 ರಿಂದ ಸ್ಥಳ ಶುದ್ದಿ, ಪುಣ್ಯಾಹವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12 ರಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಗೋದುಳಿ ಮುಹೂರ್ತ ನಡೆದ ವಿವಾಹ
ಸಂಜೆ 5ರಿಂದ ಶ್ರೀ ದೇವರ ವಿವಾಹ ಮಂಟಪ ಪ್ರವೇಶ, ಸೀಮಾಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ 6.30ಕ್ಕೆ ಓದಗುವ ಗೋಧೂಳಿ ಲಗ್ನ ಸುಮೂರ್ತದಲ್ಲಿ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯು ಕನ್ಯಾದಾನ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರವಿಧಾನಪೂಜೆ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕರಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ವಿಧಿ ವಿಧಾನ
ಮೂರು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನಗಳನ್ನು ವಿದ್ವಾನ್ ಡಾ. ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ವೇ.ಮೂ ಪ್ರಸನ್ನ ತುಂಗ ನೇತೃತ್ವದಲ್ಲಿ ಜರಗಿದವು.
ತಿರುಪತಿ ಪದ್ಮಾವತಿ ಶ್ರೀನಿವಾಸ ವಿವಾಹವೊತ್ಸವದ ಉಸ್ತುವಾರಿಯನ್ನು ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ಅವರ ನೇತೃತ್ವದಲ್ಲಿ ಜರಗಿತು. ಅಲ್ಲದೆ ವಿವಾಹವೊತ್ಸವ ಧಾರ್ಮಿಕ ಕೈಂಕರ್ಯದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು, ಸಮಿತಿ ಪದಾಧಿಕಾರಿಗಳಾದ ಎಂ.ಸಿ. ಚಂದ್ರಶೇಖರ್, ಪ್ರತಾಪ್ ಶೆಟ್ಟಿ, ಸುರೇಶ್ ಪೂಜಾರಿ ಮತ್ತಿತರರು ಭಾಗಿಯಾದರು.
ಇತಿಹಾಸದಲ್ಲೆ ಮೊದಲೆಂಬಂತೆ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ನಲ್ಲಿ ಸಾಕ್ಷಿಯಾಯಿತು.