ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ಕಲಾ ಸಂಘದ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡಾಕೂಟವು ಇತ್ತೀಚಿಗೆ ನಡೆಯಿತು.
ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ್ ಪುರಾಣಿಕ್, ಆಲೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದಾ ಕುಶಲ ಶೆಟ್ಟಿ, ರಾಜೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗೀತಾ ರವೀಂದ್ರ ದೇವಾಡಿಗ, ಕಲಾ ಸಂಘದ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಟ್ಟಿನಮಕ್ಕಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ನಿವೃತ್ತ ಶಿಕ್ಷಕ ನಾಗೇಶ ಶಾನುಭಾಗ್, ಶಿಕ್ಷಕರಾದ ಗಿರಿಜ, ಉದಯ ಆಚಾರ್ ಸಹಕರಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಆದರ್ಶ ಕಟ್ಟಿನಮಕ್ಕಿ ನಿರ್ವಹಿಸಿದರು.