ಕವಿತೆಯ ಮೂಲಕ ಮನುಷತ್ವ ಹುಡುಕಾಟ: ಟಿ. ಯಲ್ಲಪ್ಪ

Call us

Call us

Call us

ಮೂಡುಬಿದಿರೆ: ಅಸಹಿಷ್ಣುತೆಯೇ ತುಂಬಿರುವ ಸಮಾಜದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲ ನಮ್ಮನ್ನು ಕಾಡುತ್ತಿದೆ. ದಲಿತ ಮಕ್ಕಳನ್ನು ಸುಡುವ, ದಲಿತ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡುವ, ಅಲ್ಪಸಂಖ್ಯಾತ ಸಮುದಾಯದವರನ್ನು ಹುಡುಕಿಒ ಕೊಲ್ಲುವ ಈ ಸಮಾಜದ ಕುಕೃತ್ಯಗಳನ್ನು  ತನ್ನ ಕವಿತೆ ಮೂಲಕವಾದರೂ ಇವೆಲ್ಲವನ್ನೂ ಖಂಡಿಸುತ್ತೇನೆ ಎಂದು ಟಿ. ಯಲ್ಲಪ್ಪ ಹೇಳಿದರು.

Call us

Click Here

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಕವಿಸಮಯ ಕವಿನಮನದಲ್ಲಿ’ ತಮ್ಮ ಕವಿತೆ ವಾಚನಕ್ಕೂ ಮೊದಲು ಮಾತನಾಡಿದರು. ಅನುಭವ ಸವಿಯಲ್ಲ. ಅದರ ನೆನಪೇ ಸವಿ. ಆದರೆ ನನ್ನ ವಿಚಾರದಲ್ಲಿ ನೆನಪುಗಳು ನೋವಿನಿಂದ ಕೂಡಿದೆ. ಈ ನೋವನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವ ಕೆಲಸ ಮಾಡಿದ್ದೇವೆ ಎಂದ ಅವರು ಕಲ್ಲು ಬೀಸಿದ ಜನರನ್ನು ಕರುಣೆಯ ಕಂಗಳಿಂದ ನೋಡುವ ಜನ ನಮ್ಮವರು ಕವಿತೆ ಮೂಖಾಂತರ ಮನುಷತ್ವನ್ನು ಹುಡುಕುವ ಕೆಲಸ ಮಾಡಿದ್ದೇವೆ ಎಂದರು.

Leave a Reply