ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: 2024-25ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿರೂರಿನ ಗ್ರೀನ್ ವ್ಯಾಲಿ ಇಂಟರ್‌ನ್ಯಾಷನಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರತೀಕ್ ಪ್ರಭು ಶೇ.98.4 ಅಂಕ ಪಡೆದು, ಶಾಲೆಗೆ ಟಾಪರ್ ಆಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ.
ಪ್ರತೀಕ್ ಪ್ರಭು ಅವರು ಶಿರೂರಿನ ಉದ್ಯಮಿ ಪ್ರಸಾದ್ ಪ್ರಭು ಹಾಗೂ ಜಾನ್ವಿ ಪ್ರಭು ದಂಪತಿಗಳ ಪುತ್ರರಾಗಿದ್ದಾರೆ.










