Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅಂಪಾರು: ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ‌ಯಲ್ಲಿ ಪೋಷಕರ ಸಭೆ
    ಊರ್ಮನೆ ಸಮಾಚಾರ

    ಅಂಪಾರು: ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ‌ಯಲ್ಲಿ ಪೋಷಕರ ಸಭೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ‌ಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆ ಇತ್ತೀಚಿಗೆ ಜರುಗಿತು.

    Click Here

    Call us

    Click Here

    ಈ‌ ಸಂದರ್ಭದಲ್ಲಿ  ಶಾಲಾ ಆಡಳಿತ ಚುಕ್ಕಾಣಿ ಹಿಡಿದ ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅವಿರತ ಶ್ರಮಕ್ಕೆ  ನೈತಿಕ ಹಾಗೂ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಿದ, ಶಾಲಾ ವಾಹನವನ್ನು ಪಡೆಯಲು ಸಹಕರಿಸಿದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ  ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ‌ ಸ್ವೀಕರಿಸಿ ಮಾತನಾಡಿ, ತಮ್ಮ ಊರಿನ ಸಮೀಪದ ಶಾಲೆಗೆ ನೆರವು ನೀಡಿರುವುದು ತಮಗೆ ಸಂತೋಷದ ವಿಷಯ ಎಂದು ತಿಳಿಸಿ, ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು ಮತ್ತು ಪೋಷಕರು, ಗ್ರಾಮಸ್ಥರು ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.‌

    ಸಂಜಯಗಾಂಧಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಶಾಸ್ತ್ರೀ ಅವರು ಈ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿಸಿ, ಶಾಲೆಗೆ ನೆರವು ನೀಡಿದ ಅತಿಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಪೋಷಕರ ಸಭೆಯಲ್ಲಿ  ಅತ್ಯುತ್ತಮ ಕಿವಿಮಾತು ನುಡಿದರು, ಮಕ್ಕಳ ಪ್ರಗತಿಯಲ್ಲಿ ಪೋಷಕರ ಪಾತ್ರದ ಕುರಿತು  ಯಥೋಚಿತ ಸಲಹೆಗಳನ್ನು ನೀಡಿದರು.

    ಕಾರ್ಯಕ್ರಮದ  ಅಧ್ಯಕತೆಯನ್ನು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ  ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ವಹಿಸಿ, ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಟ್ರಸ್ಟ್ ಅತ್ಯುತ್ತಮ ಶಿಕ್ಷಣ ನೀಡಲು ಬದ್ಧ, ಈ ನಿಟ್ಟಿನಲ್ಲಿ ನಿಸ್ವಾರ್ಥ ಮನೋಭಾವದಿಂದ ಅವಿರತವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿ, ಪೋಷಕರಿಗೆ ತಮ್ಮ ಮಗುವಿಗಾಗಿ ನಮ್ಮ ಉತ್ತಮ ಸಂಸ್ಥೆಯನ್ನು ಆಯ್ದುಕೊಂಡದ್ದಕ್ಕೆ ಅಭಿನಂದನೆ ಸಲ್ಲಿಸಿ, ಪೋಷಕರ ಸಭೆಗೆ ಪೋಷಕರ ಹಾಜರಾತಿ ಕಡ್ಡಾಯ ಎಂದು ತಿಳಿಸಿದರು ಮತ್ತು ಸಭೆಯಲ್ಲಿ ಗೈರು ಹಾಜರಿದ್ದ  ಪೋಷಕರು ಮುಂದಿನ ಪೋಷಕರ ಸಭೆಯಲ್ಲಿ ಕಡ್ಡಾಯವಾಗಿ  ಉಪಸ್ಥಿತರಿರುವಂತೆ  ಕರೆ ಕೊಟ್ಟರು.

    ಟ್ರಸ್ಟ್ ನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಅವರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು, ಅವುಗಳನ್ನು ಸಾಕಾರಗೊಳಿಸಲು ಟ್ರಸ್ಟ್ ನ ಬದ್ಧತೆ, ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣದ ಖಚಿತವಾಗಿ ನೀಡುತ್ತಿದೆ ಎಂದರು.

    Click here

    Click here

    Click here

    Call us

    Call us

    ಖಜಾಂಚಿ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ನೀಡುವ ಅನಿವಾರ್ಯತೆ, ಈ ನಿಟ್ಟಿನಲ್ಲಿ ಶಾಲೆ, ಶಿಕ್ಷಕರು ಮತ್ತು ಪೋಷಕರ ಮಹತ್ತರ ಪಾತ್ರದ ಕುರಿತು ಮನೋಜ್ಞವಾಗಿ ತಿಳಿಸಿದರು.

    ನಿರ್ದೇಶಕರಾದ ಉಮೇಶ್ ಕೊಠಾರಿ ಅವರು ಪೋಷಕರ ಕರ್ತವ್ಯ, ಮಕ್ಕಳು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

    ಸಂಜಯಗಾಂಧಿ ಫಂಡ್ ಕಮಿಟಿ ಅಧ್ಯಕ್ಷೆ ಶಾರದಾ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ  ಅವರು ಶಾಲಾ ಶೈಕ್ಷಣಿಕ ವರ್ಷದ ಯೋಜನೆಗಳ ಕುರಿತು ಮಾಹಿತಿ ನೀಡಿ, ಶಾಲಾ ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

    ಉದಯ್ ಕುಮಾರ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದು ಪ್ರೌಢಶಾಲೆಯ ಕಾರ್ಯ ವೈಖರಿ ಕುರಿತು ಮಾತನಾಡಿದರು.

    ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು,  ಮಕ್ಕಳ ಪ್ರಗತಿಯ ಕುರಿತು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡರು.

    ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು, ಮುಖ್ಯ ಶಿಕ್ಷಕಿ ವಿಲಾಸಿನಿ ಶೆಟ್ಟಿ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ತ್ರಾಸಿ: ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ – ಓರ್ವ ಮೃತ್ಯು, ತಂದೆ ಮತ್ತು ಮಗಳಿಗೆ ಗಾಯ

    07/07/2026

    ಕೊಲ್ಲೂರು ದೇವಾಸ್ಥಾನದಲ್ಲಿ 80 ಸಾವಿರ ರೂ. ಕಳ್ಳತನ, ಮೂವರು ಮಹಿಳಾ ಆರೋಪಿಗಳ ಬಂಧನ

    07/07/2026

    ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬ: ಜಯಪ್ರಕಾಶ್ ಹೆಗ್ಡೆ

    07/07/2026
    Leave A Reply Cancel Reply

    thirteen + eighteen =

    Call us

    Click Here

    Call us

    Call us

    Call us
    Highest Viewed Recently
    • ತ್ರಾಸಿ: ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ – ಓರ್ವ ಮೃತ್ಯು, ತಂದೆ ಮತ್ತು ಮಗಳಿಗೆ ಗಾಯ
    • ಉಚಿತ ಉಪಕರಣ ಸೌಲಭ್ಯ ಪಡೆಯಲು ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
    • ಜಾನುವಾರುಗಳ ಸಂಖ್ಯೆ ಗಣನೀಯ ಇಳಿಕೆ ಆಗಿರುವುದು ಆತಂಕ ಪಡುವ ವಿಚಾರ: ಶಾಸಕ ಗುರುರಾಜ್‌ ಗಂಟಿಹೊಳೆ
    • ಕೊಲ್ಲೂರು ದೇವಾಸ್ಥಾನದಲ್ಲಿ 80 ಸಾವಿರ ರೂ. ಕಳ್ಳತನ, ಮೂವರು ಮಹಿಳಾ ಆರೋಪಿಗಳ ಬಂಧನ
    • ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಬದುಕಿನ ಪ್ರತಿಬಿಂಬ: ಜಯಪ್ರಕಾಶ್ ಹೆಗ್ಡೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.