ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಮಹಾವಿಷ್ಣುಭಜನಾ ಸಂಘ ಶ್ರೀ ವಿಷ್ಣುಮೂರ್ತಿ ದೇವಸ್ಥಾಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾರ್ಪಣಂ ಅಭಿವರ್ಷ ಕಾರ್ಯಕ್ರಮ ಮಹಾವಿಷ್ಣು ಸಭಾಂಗಣದಲ್ಲಿ ಜರಗಿತು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶ್ರೀ ಮಹಾವಿಷ್ಣುಭಜನಾ ಸಂಘ ಪಾರಂಪಳ್ಳಿ ಇದರ ಗೌರವಾಧ್ಯಕ್ಷ ಡಾ.ಪಿ ವಿಷ್ಣುಮೂರ್ತಿ ಐತಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಾರಂಪಳ್ಳಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ. ರಾಮಚಂದ್ರ ಉಪಾಧ್ಯ, ಜಯ ವೈ.ಎನ್. ಹೇರ್ಳೆ ಸುಮತಿ, ರಾಘವೇಂದ್ರ ಮಧ್ಯಸ್ಥ (ರಘು), ಶ್ರೀಪತಿ ಹೇರ್ಳೆ, ನಾರಾಯಣ ಪೂಜಾರಿ, ವಾರಿಜಾಕ್ಷಿ, ಸರದಿ ಅರ್ಚಕ ಪ್ರತಿನಿಧಿಗಳಾದ ಚಂದ್ರಶೇಖರ ಅಡಿಗ, ರಾಧಾಕೃಷ್ಣ ಅಡಿಗ ಗೌರವ ಅಭಿನಂದನೆ ನೀಡಲಾಯಿತು.
ಗೌರವಾರ್ಪಣಂ ಇದರ ಭಾಗವಾಗಿ ಸಂಘದ ಹಿರಿಯ ಸದಸ್ಯರಾದ ಪಿ. ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಹೇರ್ಳೆ, ಶ್ರೀನಿವಾಸ ಉಪಾಧ್ಯಾಯ, ಚಂದ್ರಶೇಖರ ಅಡಿಗ, ಆನಂದರಾಮ ಹೇರ್ಳೆ, ಪಿ. ಯಜ್ಞನಾರಾಯಣ ಹೇರ್ಳೆ, ಸುಪ್ರಭಾತ ನರಸಿಂಹ ಐತಾಳ, ಸೀತಾರಾಮ ಐತಾಳ, ಪದ್ಮನಾಭ ಉಪಾಧ್ಯ, ಸೂರ್ಯನಾರಾಯಣ ಹೇರ್ಳೆ, ಜನಾರ್ದನ ಹೇರ್ಳೆ, ಮಾಲತಿ ಅಡಿಗ ಗೌರವಿಸಲಾಯಿತು.
ಅಭಿನಂದನೆಯ ವರ್ಷದ ಅಂಗವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಬ್ಯಾಂಕ್ ಪಡೆದ ಕೇಶವ ಉಪಾಧ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಹಾವಿಷ್ಣು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ರಾಮಚಂದ್ರ ಐತಾಳ್, ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ಇದರ ಅಧ್ಯಕ್ಷ ಶಿವರಾಮ ಉಡುಪ, ಕಸಾಪ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾರ್ಯದರ್ಶಿ ಸುರೇಶ್ ತುಂಗ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸುಧಾಕರ ನಾವಡ ಸ್ವಾಗತಿಸಿ, ಕಾರ್ಯದರ್ಶಿ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ನಿರೂಪಿಸಿ, ಸಚಿನ್ ಹೇರ್ಳೆ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಆರ್ಯಭಟ ಪ್ರಶಸ್ತಿ ಪುರಸ್ಕೃತ, ಕಲಾಸಾರಥಿ ತೋನ್ಸೆ ಶ್ರೀ ಪುಷ್ಕಳಕುಮಾರ್ ಅವರಿಂದ ಶ್ಯಮಂತಕೋಪಾಖ್ಯಾನ ಎಂಬ ಹರಿಕಥಾ ಕೀರ್ತನೆ ಜರಗಿತು.















