ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಕೋಟ ರೋಟರಿ ಕ್ಲಬ್ ಸಿಟಿ ಸದಸ್ಯತ್ವ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಶಸ್ತಿ ಪಡೆಯುವುದರೊಂದಿಗೆ ಒಟ್ಟು 12 ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಹೋಟೆಲ್ ಕೋಸ್ಟಲ್ ಪ್ಯಾರಾಡೈಸ್ ಪಾಂಡೇಶ್ವರ ಇಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ದೇವಾನಂದ ರೋಟರಿ ಕೋಟ ಸಿಟಿ ನಿಕಟಪೂರ್ವ ಅಧ್ಯಕ್ಷ ಅನಿಲ್ ಸುವರ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಕಳೆದ ಸಾಲಿನಲ್ಲಿ ಕ್ಲಬ್ ಮಾಡಿದ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.
ಈ ಸಂದರ್ಭ ಜಿಲ್ಲಾ ಗವರ್ನರ್ ಪಾಲಾಕ್ಷ ಕೆ., ಅವಾರ್ಡ್ಸ ಕಮಿಟಿ ಚೇರ್‌ಮನ್ ಬಿ.ಸಿ.ಗೀತಾ, ವೈಸ್ ಚೇರ್‌ಮನ್ ಜೈ ಕಿಶನ್ ಶೆಟ್ಟಿ, ಕ್ಲಬಿನ ನಿಕಟಪೂರ್ವ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.










