ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಪರ್ಧಾ ಜಗತ್ತಿನ ಅನೇಕ ಸವಾಲುಗಳು ಹಾಗೂ ಸಫಲತೆಯ ಹಿಂದಿರುವ ಪ್ರೇರಣಾದಾಯಕ ಅಂಶಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಇನ್ನೋವೇಶನ್ ಆ್ಯಂಡ್ ಎಂಟ್ರಪ್ರಿನ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್ ಇದರ ಆಶ್ರಯದಲ್ಲಿ ರಾಷ್ಟç ಪ್ರಶಸ್ತಿ ವಿಜೇತ ‘12th ಫೇಲ್’ಸಿನಿಮಾ ಪ್ರದರ್ಶನ ಹಾಗೂ ವಿಮರ್ಶೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪದವಿ ಶಿಕ್ಷಣಾರ್ಹತೆಯ ಜೊತೆಗೆ ರಾಜ್ಯ ಸರ್ಕಾರ ಆಯೋಜಿಸುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನ ಆವರಣದಲ್ಲಿಯೇ ತರಬೇತಿ ನೀಡುವ ಉದ್ದೇಶದಿಂದ ಪ್ರಸ್ತುತ 2025-26 ರಿಂದ ಆರಂಭಗೊAಡ ಬಿ.ಕಾಂ. ಜೊತೆಗೆ ಎಸ್.ಎಸ್.ಸಿ. ವಿದ್ಯಾರ್ಥಿಗಳು ಕಾರ್ಯಕ್ರಮದ ಫಲಾನುಭವಿಗಳಾಗಿದ್ದಷ್ಟೇ ಅಲ್ಲದೆ ಸಿನಿಮಾದ ಕುರಿತು ರಚನಾತ್ಮಕವಾಗಿ ವಿಮರ್ಶೆ ನೀಡಿರುವುದು ವಿಶೇಷ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ಉಮೇಶ್ ಶೆಟ್ಟಿ ಇವರು ಮಾತನಾಡಿ, ಎಸ್.ಎಸ್.ಸಿ. ವಿದ್ಯಾರ್ಥಿಗಳು ಸರ್ಕಾರಿ ನೌಕರಿಯ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದ ಜೊತೆಗೆ ಗುರಿಯನ್ನು ತಲುಪುವಲ್ಲಿ ಅವಿರತ ಪ್ರಯತ್ನ ಮಾಡಬೇಕು ಮತ್ತು ಸೋತಾಗ ಸಮತೋಲಿತ ಮನಸ್ಥಿತಿ ಹೊಂದಿದಲ್ಲಿ ಗೆಲುವು ಪಡೆಯಬಹುದು ಎಂದರು.
ಇನ್ನೋವೇಶನ್ ಸೆಲ್ ಸಂಯೋಜಕರಾದ ಅಕ್ಷಯ್ ಕುಮಾರ್ ಹಾಗೂ ಪ್ರಣಮ ಬಿ. ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ಸ್ವಾಗತಿಸಿ, ಸಂಯೋಜಕರಾದ ಶರತ್ ಕುಮಾರ್ ನಿರೂಪಿಸಿದರು.










