ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಸಾಮರ್ಥ್ಯಾಭಿವೃದ್ಧಿ, ಬ್ರಾöಯಂಡ್ ಅಭಿವೃದ್ಧಿ, ವಿನ್ಯಾಸ ಪ್ಯಾಕೇಜಿಂಗ್ ವಿನ್ಯಾಸ ಹಾಗೂ ಮೌಲ್ಯವರ್ಧನೆ ಸರಪಳಿಯಡಿಯಲ್ಲಿನ ಚಟುವಟಿಕೆಗಳ ಬಲವರ್ಧನೆಗೆ ಆರ್ಥಿಕ ನೆರವು ಪಡೆಯಲು ಘಟಕದಡಿ ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ರೈತ ಗುಂಪುಗಳು ಮತ್ತು ರೈತ ಸಾವಯವ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.









