ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗ್ರಾಮೀಣ ಜನರ ಆರ್ಥಿಕ ಕೊಂಡಿಯಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೋಟದ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕೋಟದ ವಾಸುದೇವ ಮಂಟಪದಲ್ಲಿ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ಇದರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯ ಜನರಿಗೆ ಅತಿ ಸುಲಭದಲ್ಲಿ ಸಾಲದ ಸೌಲಭ್ಯ ಸಿಗುವುದು. ಸಹಕಾರಿ ಸಂಘದಲ್ಲಿ ಈ ಮೂಲಕ ಬದುಕಿನ ಯಶಸ್ಸಿನ ಘಟ್ಟ ತಲುಪಲು ಸಾಧ್ಯ ಎಂದು ತಮ್ಮ ಸಂಘ ಅಭಿವೃದ್ಧಿ ಪಥಕ್ಕೆ ಮುನ್ನುಡಿ ಬರೆಯುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪೂಜಾರಿ ಹಂದಟ್ಟು ವಾರ್ಷಿಕ ವರದಿ, ಜಮಾಕರ್ಚು ಸೇರಿದಂತೆ ವಿವಿಧ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ದಿಕ್ಷಾವಿ. ಬ್ರಹ್ಮಾವರ ಹಾಗೂ ಪರಿಸರಸ್ನೇಹಿ ಸಾಮಾಜಿಕ ಸಂಘಟನೆ ಕೋಟದ ಪಂಚವರ್ಣ ಯುವಕ ಮಂಡಲವನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸರೋಜ ಮನೋಹರ್ ಪೂಜಾರಿ, ನಿರ್ದೇಶಕರುಗಳಾದ ಮಾಧವ ಪೂಜಾರಿ, ನಾಗೇಶ್ ಪೂಜಾರಿ, ಸಂತೋಷ್ ಸುವರ್ಣ, ಪುಷ್ಭ ಹಂದಟ್ಟು, ಅಶೋಕ್ ಪೂಜಾರಿ, ಕೋಟಿ ಪೂಜಾರಿ ವಡ್ಡರ್ಸೆ, ಜಯಂತಿ ಪೂಜಾರಿ, ನವೀನ್ ಪೂಜಾರಿ ಬಣ್ಣದ ಬೈಲ್, ಸಂಘದ ಸಿಬ್ಬಂದಿ ಮನೋಜ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.
ಕೋಟದ ವಾಸುದೇವ ಮಂಟಪದಲ್ಲಿ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ಇದರ ಮಹಾಸಭೆಯಲ್ಲಿ ಪರಿಸರಸ್ನೇಹಿ ಸಾಮಾಜಿಕ ಸಂಘಟನೆ ಪಂಚವರ್ಣ ಸಂಘಟನೆಯನ್ನು ಗುರುತಿಸಿ ಗೌರವಿಸಲಾಯಿತು. ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪೂಜಾರಿ ಹಂದಟ್ಟು ಇದ್ದರು.















