ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಬಾರಿಕೆರೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಕಾಂಚನ್ ವಹಿಸಿ ಮಾತನಾಡಿ, ಸಂಘಕ್ಕೆ ಗುಣಮಟ್ಟದ ಹಾಲು ನೀಡುವಂತೆ ಸಲಹೆ ನೀಡಿದ ಅವರು ಹೈನುಗಾರು ಹೆಚ್ಚು ಸಂಘಕ್ಕೆ ಹಾಲು ಪೂರೈಸಲು ವಿನಂತಿಸಿ, ಹೈನುಗಾರಿಕೆಗೆ ಸಂಪೂರ್ಣ ಬೆಂಬಲ ಸೇರಿದಂತೆ ಸಂಘದ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿ ಕೆ.ಎಂ.ಎಫ್ ವಿಸ್ತರಣಾಧಿಕಾರಿ ಸರಸ್ವತಿ, ಕೋಟತಟ್ಟು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸರಸ್ವತಿ, ಸಿಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್ ಬಾರಿಕೆರೆ, ಉದ್ಯಮಿ ಸುರೇಶ್ ಗಾಣಿಗ ಶೇವದಿ, ಹಾಗೂ ಉಪಾಧ್ಯಕ್ಷ ಚಂದ್ರಹಾಸ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದಿಗಂತ ಪೂಜಾರಿ ಬಾರಿಕೆರೆ ಪ್ರಥಮ ಬಾರಿಕೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ 90% ಗಿಂತ ಹೆಚ್ಚಿಗೆ ಅಂಕಗಳಿಸಿದ ಹಾಗೂ ಪ್ರತಿಕ್ಷಾ ಬಾರಿಕೆರೆ ಹಾಗೂ ಶ್ರೇಷ್ಠ ಬಾರಿಕೆರೆ ಅವರುಗಳನ್ನು ಸನ್ಮಾನಿಸಿ ಗೌಡಿಸಲಾಯಿತು.
ಸಂಘದ ಏಳು ವರ್ಷದ ವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಕೆ. ಸತೀಶ್ ಕುಂದರ್ ಬಾರಿಕೆರೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೋಭ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.















