ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ 12ನೇ ವಾರ್ಷಿಕ ಮಹಾಸಭೆಯು ಕೋಡಿ ಕನ್ಯಾಣದ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು.
ಸಂಸ್ಥೆಯ ಅಧ್ಯಕ್ಷ ಶಂಭು ಪೂಜಾರಿ ಮಹಾಸಭೆಗೆ ಸ್ವಾಗತಿಸಿ ಮಾತನಾಡಿ, ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 100 ಕೋಟಿಗೂ ಅಧಿಕ ವ್ಯವಹಾರ ನಡೆಸಿ, ಸುಮಾರು 16 ಲಕ್ಷಕ್ಕೂ ಅಧಿಕ ಲಾಭಗಳಿಸಿ, ಸದಸ್ಯರಿಗೆ ಶೇಕಡಾ 15 ರಷ್ಟು ಡಿವಿಡೆಂಡ್ ವಿತರಿಸಿರುವುದಕ್ಕೆ ಬಹಳಷ್ಟು ಹರ್ಷ ವ್ಯಕ್ತಪಡಿಸಿದರು.
ನಂತರ ವಾರ್ಷಿಕ ಮಹಾಸಭೆಯ ಆಡಳಿತ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕಿ ಪ್ರತಿಮಾ ವಾಚಿಸಿದರು. ಲೆಕ್ಕಪಾರಿಶೋಧನ ವರದಿಯನ್ನು ವ್ಯವಸ್ಥಾಪಕರಾದ ಸಂದೀಪ್ ಕರ್ಕೇರ ವಾಚಿಸಿದರು. ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರವಾಗಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕರ್ಕೇರ ಮಂಡಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಡುಪಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ. ಎಸ್ ಸಂಸ್ಥೆಯ ಗೌರವ ಸನ್ಮಾನವನ್ನು ಸ್ವೀಕರಿಸಿ, ಸಂಸ್ಥೆಯ ಬೆಳವಣಿಗೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾಡುತ್ತಿರುವ ಸಮಾಜ ಸೇವೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಸಹಕಾರಿ ರಂಗಕ್ಕೆ ಸೌಹಾರ್ದ ಸಹಕಾರಿಗಳ ಕೊಡುಗೆಯ ಬಗ್ಗೆ ವಿವರಿಸಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕರುಗಳಾದ ಭಾಸ್ಕರ ಕಾಂಚನ್, ದಯಾನಂದ ಕರ್ಕೇರ, ಲಕ್ಷ್ಮಣ ಖಾರ್ವಿ, ರಾಘವೇಂದ್ರ ಸುವರ್ಣ, ಉದಯ ಕಾಂಚನ್, ಜಯಕುಮಾರ್ ಎ ಎಸ್, ರೋನಾಲ್ಡ್ ಡಿ. ಸೋಜಾ, ಆಶಾ ಉಪಾಧ್ಯ, ಜಯಂತಿ ಎಸ್. ಮೊಗವೀರ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡ 80ಕ್ಕೂ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಿಇಓಗಳನ್ನು ಸಂಸ್ಥೆಯ ಅಧ್ಯಕ್ಷರು ಗುರುತಿಸಿ ಗೌರವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ವ್ಯವಸ್ಥಾಪಕರು ಸಂದೀಪ್ ಕರ್ಕೇರ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.















