ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಬೈಂದೂರು ವತಿಯಿಂದ ಶಿಕ್ಷಣವೇ ಶಕ್ತಿ ಶಿಕ್ಷಣವೇ ಆಸ್ತಿ” ಎಂಬ ಧ್ಯೇಯ ವಾಕ್ಯದಡಿ, ಅಮ್ಮನವರ ತೊಪ್ಪಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸುಮಾರು 20 ಸಾವಿರ ಮೌಲ್ಯದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶಾರದಾ ನಾರಾಯಣ್ ಹಾಗೂ ಸದಸ್ಯರಾದ ಲತಿಕಾ ನಂಬಿಯಾರ್ ಅವರ ನೇತೃತ್ವದಲ್ಲಿ ಕೊಡುಗೆಗೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರು, ಇನ್ನರ್ ವೀಲ್ ನ ಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಸ್. ಶೆಟ್ಟಿ, ಕಾರ್ಯದರ್ಶಿ ಚೈತ್ರ ಯಡ್ತರೆ, ಮುಖ್ಯೋಪಾಧ್ಯಾಯರಾದ ನಾಗರಾಜ್ ಬಿ., ಇನ್ನರ್ ವೀಲ್ ನ ಸದಸ್ಯರು ಶಿಕ್ಷಕರು,ಪೋಷಕರು ಹಾಜರಿದ್ದರು.
ಕಾರ್ಯಕ್ರಮವನ್ನು ಶಾಲಾ ಉಪನಾಯಕ ಪುಷ್ಕಳ ಸರ್ವರನ್ನು ಸ್ವಾಗತಿಸಿ, ಶಾಲಾ ನಾಯಕಿ ಪ್ರದ್ವಿ ಕೆ. ನಿರೂಪಿಸಿ, ರನಿತಾ ವಂದಿಸಿದರು.










