ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಾಲಾಡಿ ರಸ್ತೆಯ ಅಮಾಸೆಬೈಲು ಅರಣ್ಯ ಇಲಾಖೆ ಕಚೇರಿಯ ಬಳಿ ಓಮ್ನಿ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸೈಕಲ್ ಸವಾರ ಮಹಾಬಲ ಪೂಜಾರಿ (55) ಗಂಭೀರ ಗಾಯಗೊಂಡವರು.
ಓಮ್ನಿ ಚಾಲಕ ವಸೀಮ್ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ತುರ್ತು ಚಿಕಿತ್ಸೆಯಿಂದ ಉಳಿದ ಜೀವ:
ಅಪಘಾತ ನಡೆದ ಸಂದರ್ಭ ಮಹಾಬಲ ಅವರಿಗೆ ಗಂಭೀರ ಗಾಯವಾಗಿದ್ದರಿಂದ ಅವರು ಮೃತಪಟ್ಟಿರಬಹುದೆಂದು ಸ್ಥಳೀಯರು ಭಾವಿಸಿ ದೂರವೇ ನಿಂತಿದ್ದರು. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬಂದಿ ಶಶಿಧರ ಶೆಟ್ಟಿ ಹಾಲಾಡಿ ಅವರು, ಗಾಯಾಳುವನ್ನು ನೋಡಿ ಉಪಚರಿಸಿದರು. ಸ್ಥಳೀಯರಾದ ನಂದನ್, ಅರುಣ್ ಶೆಟ್ಟಿ ಮತ್ತು ರಾಜೇಶ್ ಅವರ ನೆರವಿನೊಂದಿಗೆ ಕಾರಿನಲ್ಲಿ ಹಾಲಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು.ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















