ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಚಿತ್ರಪಾಡಿ ಈಶಲಾಸ್ಯ ನಾಟ್ಯಾಲಯ ಅವರಿಂದ ನೃತ್ಯಾಂಜಲಿ ಕಾರ್ಯಕ್ರಮ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರಗಿತು.
ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಅನಂತ ಪದ್ಮನಾಭ ಐತಾಳ ವಹಿಸಿದ್ದರು.
ಈ ವೇಳೆ ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಸಾಂಸ್ಕೃತಿಕ ಚಿಂತಕಿ ಪ್ರೇಮ ಶೆಟ್ಟಿ ಉಪಸ್ಥಿತರಿದ್ದರು.
ಈಶ್ಯಲಾಸ್ಯ ನಾಟ್ಯಾಲಯದ ಮುಖ್ಯಸ್ಥೆ ಅಮೃತ ವೆಂಕಟೇಶ ಮಯ್ಯ ಕಾರ್ಯಕ್ರಮ ಸಂಯೋಜಿಸಿದರು. ಡಾ. ಸ್ವಾತಿ ಉಪಾಧ್ಯ ನಿರೂಪಿಸಿ, ವಿದ್ವಾನ್ ಮಂಜುನಾಥ ಉಪಾಧ್ಯ ಸ್ವಾಗತಿಸಿ, ರಾಜ ಪಾರಂಪಳ್ಳಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಈಶಲಾಸ್ಯ ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು. ಈಶಲಾಸ್ಯ ತಂಡದ ವನಿತಾ ಉಪಾಧ್ಯ ನಿರ್ವಹಿಸಿದರು.















