ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರತಿಭೆ ಇರುವವರನ್ನು ಸ್ಮರಿಸಿದರೆ ಯುವ ಜನಾಂಗಕ್ಕೆ ಪ್ರೇರಣೆಯಾಗಲಿದೆ. ದಾನಿಗಳ ಸಹಕಾರ, ಪ್ರೇಕಕ ಅಭಿಮಾನಿಗಳಿಂದ ಯಕ್ಷಗಾನ ಕಲೆ ಬೆಳೆಯಬೇಕು ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಯಕ್ಷಗಾನ ಸಪ್ತೋತ್ಸವದ ನಮ್ಮ ಕಾಳಿಂಗ ನಾವಡ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಯಕ್ಷಗಾನ ಕಲಾ ಕೇಂದ್ರ ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಕಾಳಿಂಗ ನಾವುಡರು ನಮ್ಮನ್ನು ಅಗಲಿ 30 ವರ್ಷ ಸಂದರೂ ಅವರು ಇಂದಿಗೂ ಅಮರರಾಗಿದ್ದಾರೆ ಎಂದರು.
ಕಾಳಿಂಗ ನಾವಡ ಸಂಸ್ಮರಣೆಯನ್ನು ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಗೈದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ ಅಭಿನಂದನಾ ನುಡಿಗಳನ್ನಾಡಿದರು. ಸಭೆಯ ಅಧ್ಯಕ್ಷತೆಯನ್ನು ನಮ್ಮ ಕಾಳಿಂಗ ನಾವಡ ಪ್ರಶಸ್ತಿ ಸಮಿತಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ವಹಿಸಿದ್ದರು.
ಇದೇ ವೇಳೆ ನಮ್ಮ ಕಾಳಿಂಗ ನಾವಡ ಪ್ರಶಸ್ತಿಯನ್ನು ಯಕ್ಷಗಾನ ಕ್ಷೇತ್ರದ ಸಾಧಕ ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ ಸ್ವೀಕರಿಸಿದರು.
ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಸಿ.ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಭಾಗವತ ದಿ. ಕಾಳಿಂಗ ನಾವಡ ಸಹೋದರ ಗಣಪಯ್ಯ ನಾವಡ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಕಲಾಕೇಂದ್ರದ ವೈಕುಂಠ ಹೆಬ್ಬಾರ್ ನಿರೂಪಿಸಿ, ವಂದಿಸಿದರು.
ಸಪ್ತೋತ್ಸವದ ಅಂಗವಾಗಿ ಕೋಟದ ಪಂಚವರ್ಣ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.















